ಬ್ಯೂಟಿ ಟಿಪ್ಸ್:
ನೈಸರ್ಗಿಕವಾಗಿಯೇ ಮುಖದ ಅಂದ ಹೆಚ್ಚಿಸಿದರೆ ಅದು ಹೆಚ್ಚು ಕಾಲದವರೆಗೆ ಉಳಿಯುತ್ತದೆ ಎಂಬುದು ಸಾಮಾನ್ಯ ವಿಷಯ. ಆದರೆ ಈ ರೀತಿ ಮಾಡಲು ತ್ವಚೆಯ ಆರೈಕೆ ಹೇಗೆ ಎಂಬುದಕ್ಕೆ ಇಲ್ಲಿದೆ ಸಿಂಪಲ್ ಕೇರ್….
ಸ್ಟೀಮ್ ಅಥವಾ ಹಬೆಯ ಚಿಕಿತ್ಸೆ ಮುಖದ ಅಂದವನ್ನು ಹೆಚ್ಚಿಸುವುದಲ್ಲದೇ, ಪದೇ ಪದೇ ಕಾಡುವ ತ್ವಚೆಯ ಸಮಸ್ಯೆಯಿಂದ ಮುಖದ ಅಂದವನ್ನು ಕಾಪಾಡುತ್ತದೆ.ಸ್ಟೀಮ್ ಅಥವಾ ಹಬೆಯ ಚಿಕಿತ್ಸೆಯಿಂದ ಏನೆಲ್ಲಾ ಲಾಭ ಇಲ್ಲಿದೆ ನೋಡಿ….
1.ಮೊಡವೆ ನಿವಾರಣೆ: ಮೊಡವೆ ಮೂಡಲು ಮುಖ್ಯ ಕಾರಣ ಮುಚ್ಚಿಹೋದ ಪೋರ್ಸ್ಗಳು. ಸ್ಟೀಮ್ ತೆಗೆದುಕೊಳ್ಳುವುದರಿಂದ ಈ ಪೊರ್ಸ್ಗಳು ತೆರೆದುಕೊಳ್ಳುತ್ತವೆ. ಜೊತೆಗೆ ತ್ವಚೆಯಲ್ಲಿ ಸೇರಿಕೊಂಡಿರುವ ಕೊಳೆ, ಎಣ್ಣೆಯಂಶವನ್ನು ತೆಗೆದು ಹಾಕುತ್ತದೆ. ಇದರಿಂದ ಮೊಡವೆಗಳನ್ನು ತಡೆಯಬಹುದು.
2.ಆ್ಯಂಟಿ ಏಜಿಂಗ್: ಹಬೆಯನ್ನು ತೆಗೆದುಕೊಳ್ಲುವುದರಿಂದ ಸಿಗುವ ಇನ್ನೊಂದು ಲಾಭವೆಂದರೇ ಆ್ಯಂಟಿ ಏಜಿಂಗ್. ಇದು ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದಲ್ಲಿನ ಟಾಕ್ಸಿನ್ ಅಂಶವನ್ನು ತೆಗೆಯುತ್ತದೆ, ಹೀಗಾಗಿ ನಿಮ್ಮ ತ್ವಚೆ ಯಂಗ್ ಆಗಿ ಕಾಣಲು ಸಹಾಯ ಮಾಡುತ್ತದೆ.
3.ಬ್ಲ್ಯಾಕ್ ಹೆಡ್ಸ್ ತೆಗೆಯಲು ಸಹಕಾರಿ: ಬ್ಲ್ಯಾಕ್ ಹೆಡ್ಸ್ ಮತ್ತು ವಯಟ್ ಹೆಡ್ಸ್ ಸಮಸ್ಯೆ ಇರುವವರು ಹಬೆ ಚಿಕಿತ್ಸೆಯನ್ನು ತೆಗೆದುಕೊಂಡರೇ ಉತ್ತಮ. ಸ್ಟೀಮ್ ಪೋರ್ಸ್ಗಳನ್ನು ತೆರೆಯುತ್ತವೆ, ಇದರಿಂದ ಬ್ಲ್ಯಾಕ್ ಹೆಡ್ಸ್ ಸುಲಭವಾಗಿ ಸ್ವಚ್ಛಗೊಳ್ಳುತ್ತವೆ.
4.ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ: ಡೆಡ್ ಸೆಲ್ಸ್ಗಳು ಸೇರಿಕೊಳ್ಳುವುದರಿಂದ ತ್ವಚೆ ಡಲ್ ಆಗಿ ಕಾಣುತ್ತದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಈ ರೀತಿಯ ಸತ್ತ ಜೀವಕೋಶಗಳು ಸ್ವಚ್ಛವಾಗಿ ಮುಖಕ್ಕೆ ಕಾಂತಿ ಸಿಗುತ್ತದೆ……