Breaking News

ಮೈಸೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮೇಲೆ ಪೊಲೀಸರ ಕಟ್ಟೆಚ್ಚರ..!

ಮೈಸೂರು-ಹುಣಸೂರು ರಸ್ತೆಯ ಫ್ಲೈ ಓವರ್ ಇಂದು ರಾತ್ರಿ ಬಂದ್....

SHARE......LIKE......COMMENT......

ಮೈಸೂರು:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಮೈಸೂರು-ಹುಣಸೂರು ರಸ್ತೆಯ ಹಿನಕಲ್ ಜಂಕ್ಷನ್ ನಲ್ಲಿರುವ ನೂತನ‌ ಫ್ಲೈ ಓವರ್ ಇಂದು ರಾತ್ರಿ ಬಂದ್ ಆಗಲಿದ್ದು ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಫ್ಲೈ ಓವರ್ ಮೇಲೆ ಸಂಚಾರ ನಿರ್ಬಂಧ ಹೆರಲಾಗಿದೆ.ಚಾಮುಂಡಿಬೆಟ್ಟ ಸೇರಿ ಪ್ರವಾಸಿ ತಾಣಗಳಲ್ಲಿ ಪೊಲೀಸರ ಕಣ್ಗಾವಲು ಇದ್ದು ರಾತ್ರಿ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿತ, ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ನಿರ್ಬಂಧ,ಹೋಟೆಲ್ ಗಳಲ್ಲೂ ಸಂಭ್ರಮಾಚರಣೆಗೆ ಷರತ್ತು ಅನ್ವಯಿಸಿದ್ದು.ಸಂಭ್ರಮದ ಹೆಸರಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನಿಡಿದ್ದಾರೆ……