ಸ್ಯಾಂಡಲ್ವುಡ್:
ಸ್ಯಾಂಡಲ್ವುಡ್ನ Mr&Mrs ರಾಮಾಚಾರಿಯ ನಿವಾಸಕ್ಕೆ ಭಾಗ್ಯಲಕ್ಷ್ಮೀ ಎಂಟ್ರಿ ಕೊಟ್ಟಿದ್ದಾಳೆ. ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ವುಡ್ ಸಿಂಡ್ರೆಲಾ ಜೋಡಿಗೆ ಹೆಣ್ಣುಮಗು ಆಗಿದೆ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಫೋರ್ಟಿಸ್ ಲಾಫೆಮ್ ಆಸ್ಪತ್ರೆಯಲ್ಲಿ ರಾಧಿಕಾ ಬೆಳಗ್ಗೆ 6.10ಕ್ಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸಿಜೆರಿಯನ್ ಮೂಲಕ ರಾಧಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯದಿಂದ್ದಾರೆ.
ಡಿಸೆಂಬರ್ 9ಕ್ಕೆ ಮಗು ಜನನಕ್ಕೆ ಡೇಟ್ ವೈದ್ಯರು ಕೊಟ್ಟಿದ್ದರು. ಹೆಣ್ಣುಮಗುವಿನ ತಂದೆಯಾಗಿರೋದಕ್ಕೆ ರಾಕಿಂಗ್ ಸ್ಟಾರ್ ಯಶ್ ಫುಲ್ ಖುಷಿಯಲ್ಲಿದ್ದಾರೆ. ಮಗು ನೋಡೋಕೆ ಆಸ್ಪತ್ರೆಗೆ ಯಶ್, ಯಶ್ ಅಮ್ಮ, ಯಶ್ ಸಹೋದರಿ ಆಗಮಿಸಿದ್ದಾರೆ. ಮಗು-ತಾಯಿ ಇಬ್ಬರೂ ಆರಾಮವಾಗಿದ್ದು, ಮಗು ಮೂರೂವರೆ ಕೆಜಿ ಇದೆ…….