Breaking News

ರಾಕಿಭಾಯ್ ಗೆ 2ನೇ ದಿನವೂ ‘ಐಟಿ’ ಗೂಗ್ಲಿ..!

ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಫಂಧಿಸಿದ ಯಶ್ ತಾಯಿ

SHARE......LIKE......COMMENT......

ಬೆಂಗಳೂರು:

ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಎರಡನೇ ದಿನವೂ ಐಟಿ ದಾಳಿ ಮುಂದುವರೆದಿದೆ ನಿನ್ನೆ ತಡ ರಾತ್ರಿ ಹನ್ನೊಂದು ಘಂಟೆ ತನಕ ದಾಖಲೆ‌ ಪರಿಶೀಲನೆ ಮಾಡಿದ ಐಟಿ ಅಧಿಕಾರಿಗಳು ಯಶ್ ನಿವಾಸಕ್ಕೆ ಬೀಗ ಹಾಕಿ ಕೊಂಡು ಪೋಲೀಸ್ ರಿಂದ ಭದ್ರತೆ ಒದಗಿಸಿ ಹೊರಟ್ಟಿದ್ದರು…

ಐಟಿ ಅಧಿಕಾರಿಗಳಿಗೆ ಪ್ರತಿಯೊಂದು ಪ್ರಶ್ನೆಗೂ ಸ್ಫಂಧಿಸಿದ ಯಶ್ ತಾಯಿ ಸಹನೆಯಿಂದಲೇ ಉತ್ತರಿಸಿದರು, ಮನೆಯಲ್ಲಿರುವ ಪ್ರತಿಯೊಂದರ ಚಿನ್ನ, ಆಸ್ತಿ ಪತ್ರ, ಬ್ಯಾಂಕ್ ಡಿಟೈಲ್‌ ನೀಡಿ ಯಶ್ ಗೆ 40 ಕೋಟಿ ಸಾಲ ಇದ್ಯಂತೆ ತೋರಿಸಿದ್ದಾರೆ…

ಇನ್ನು 8 ಬ್ಯಾಂಕ್ ಖಾತೆಹೊಂದಿರುವ ಯಶ್. ಇದ್ರಲ್ಲಿ ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಎರಡು ಬ್ಯಾಂಕ್ ನಲ್ಲಿ 40 ಕೋಟಿ ಸಾಲ, ಒಂದು ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಅಂತ ಹೇಳಿದ್ದಾರೆ…

ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ.‌ಇದ್ರಲ್ಲಿ ೮ ಎಕರೆ ರಿಜಿಸ್ಟಾರ್ ಕೂಡ ಆಗಿದ್ಯಂತೆ ತಿಳಿಸಿಕೊಟ್ಟಿದ್ದಾರೆ…
ಹಾಗೂ ಮನೆಯಲ್ಲಿ ಸಿಕ್ಕ 20 kg ಗೂ ಅಧಿಕ ಬೆಳ್ಳಿ, ಸುಮಾರು4 50ಗ್ರಾಂ ಚಿನ್ನ. ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರಗಳ ಕಂಪ್ಲೀಟ್ ಮಾಹಿತಿ ಅಧಿಕಾರಿಗಳ ಮುಂದೆ ಇಟ್ಟಿದ್ದಾರೆ….