Breaking News

ರಾಜ್ಯ ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ..!

ಕಾಂಗ್ರೆಸ್, ಬಿಜೆಪಿ ಶಾಸಕರಿಗೆ ವಿಪ್ ....

SHARE......LIKE......COMMENT......

ಬೆಂಗಳೂರು:

ಯೆಸ್ ರಾಜ್ಯ ಬಜೆಟ್ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆಪರೇಷನ್ ಕಮಲದ ಹಾಗೂ ರಿವರ್ಸ್ , ಆಪರೇಷನ್ ಭೀತಿಯಿಂದ ಪಾರಾಗಲು ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಎಲ್ಲಾ ಶಾಸಕರಿಗೆ ಇ-ಮೇಲ್ ಹಾಗೂ ವಾಟ್ಸಪ್ ಮೂಲಕ ವಿಪ್ ಜಾರಿ ಮಾಡಿದೆ.

ಕಾಂಗ್ರೆಸ್ ಶಾಸಕರಿಗೆ ಕಡ್ಡಾಯವಾಗಿ ವಿಧಾನಸಭೆಗೆ ಹಾಜರಾಗುವಂತೆ ಪಕ್ಷದ ಶಾಸಕರಿಗೆ ಗಣೇಶ್ ಹುಕ್ಕೇರಿ ವಿಪ್ ಜಾರಿಗೊಳಿಸಿದ್ದಾರೆ.ಫೆ.6 ರಿಂದ 15 ರವರೆಗೆ ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಸಭಾಧ‍್ಯಕ್ಷರು ಕಲಾಪ ಆರಂಭಿಸಿ ಅಂತ್ಯಗೊಳಿಸುವವರೆಗೆ ಆಡಳಿತ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಉಪಸ್ಥಿತರಿದ್ದು, ಸರ್ಕಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿಮಾಡಲಾಗಿದೆ.ಒಂದುವೇಳೆ ವಿಪ್ ಉಲ್ಲಂಘಿಸಿ, ಗೈರು ಹಾಜರಾದರೆ ಅಂತಹ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲಾಗುವುದು ಎಚ್ಚರಿಕೆ ನೀಡಲಾಗಿದೆ.

ಇನ್ನು ಬಿಜೆಪಿ ಸಹ ತನ್ನ ಎಲ್ಲಾ ನಾಳೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಶಾಸಕರಿಗೆ ವಿಪ್ ಜಾರಿ ಮಾಡಿದೆ.

ಆದರೆ ಜೆಡಿಎಸ್ ಮಾತ್ರ ವಿಪ್ ಜಾರಿ ವಿಚಾರದಲ್ಲಿ ನಿರಾಳವಾಗಿದೆ. ನಮ್ಮ ಶಾಸಕರ ಮೇಲೆ ನಂಬಿಕೆ ಇರೋದರಿಂದ ನಾವು ವಿಪ್ ಜಾರಿ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.