Breaking News

ರೇಣುಕಾಚಾರ್ಯ ಮರಳು ಸಂಗ್ರಾಮ..ಹೊನ್ನಾಳಿ ಬಂದ್ ..!

ರಸ್ತೆಗಳ ಮಧ್ಯೆ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ.....

SHARE......LIKE......COMMENT......

ದಾವಣಗೆರೆ:

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರೇಣುಕಾಚಾರ್ಯ ಮರಳು ಸಂಗ್ರಾಮ ಜೋರಾಗ್ತಿದೆ. ಇವತ್ತು ಹೊನ್ನಾಳಿ ಕ್ಷೇತ್ರದ ನ್ಯಾಮತಿ, ಸಾವಳಂಗ, ಸುರಹೊನ್ನೆ ಪಟ್ಟಣಗಳಿಗೆ ಬಂದ್​ ಕರೆಕೊಟ್ಟು ರೇಣುಕಾಚಾರ್ಯ ಹೋರಾಟ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ ರೇಣುಕಾಚಾರ್ಯ ಇಂದು ಬುಲೆಟ್​ ಏರಿ ಸಂಚರಿಸೋ ಮೂಲಕ ಬಂದ್​ ಬೆಂಬಲಿಸುವಂತೆ ಜನರನ್ನು ಮನವಿ ಮಾಡಿಕೊಂಡರು. ಮರಳು ಸಮಸ್ಯೆ ಬಗೆಹರಿಸುವಂತೆ ಅಲ್ಲಲ್ಲಿ ರಸ್ತೆಗಳ ಮಧ್ಯೆ ಟೈರ್​ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ನಾಲ್ಕು ದಿನಗಳಿಂದ ರೇಣುಕಾಚಾರ್ಯ ನೇತೃತ್ವದಲ್ಲಿ ಹೋರಾಟ ನಡೆಯುತ್ತಲೇ ಇದೆ………