ಬೆಂಗಳೂರು:
ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನವಿರಲಿದ್ದು ಇದಕ್ಕಾಗಿ ರಾಜ್ಯ ತೋಟಗಾರಿಕೆ ಇಲಾಖೆ 1.8 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.ಗಣರಾಜ್ಯೋತ್ಸವ ದಿನ ಲಾಲ್ ಬಾಗ್ ಗೆ ಹೋಗುವವರು ನೀರಿನ ಬಾಟಲ್ ಅಥವಾ ತಿಂಡಿ ತಿನಿಸುಗಳನ್ನು ಒಯ್ಯುವಂತಿಲ್ಲ.ಲಾಲ್ ಬಾಗ್ ಆವರಣದಲ್ಲಿ ಸಾವಿರ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.ತುರ್ತು ಸಂದರ್ಭದಲ್ಲಿ ಲಭ್ಯವಾಗಲು 5 ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತಿದೆ.ಈ ವರ್ಷ ಗಣರಾಜ್ಯೋತ್ಸವ ದಿನ ನಡೆಯುವ ಫಲಪುಷ್ಪ ಪ್ರದರ್ಶನ ಮಹಾತ್ಮಾ ಗಾಂಧಿಯವರ ಗೌರವಾರ್ಥ ನಡೆಯಲಿದೆ……