ಬೆಂಗಳೂರು:
ಪಾಕಿಸ್ತಾನ ಕಸ್ಟಡಿಯಲ್ಲಿ 60 ಗಂಟೆಗಳು ಕಳೆದು ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ಸದ್ಯ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೂಲಿಂಗ್ ಡೌನ್ ಪ್ರಕ್ರಿಯೆ ಮೆಡಿಕಲ್ ಪರೀಕ್ಷೆಗಳಿಗೆ ಒಳಗಾಗಿದ್ರು. ಆಸ್ಪತ್ರೆಯಲ್ಲಿ ಅಭಿನಂದನ್ ಅವರ ಮಾನಸಿಕ ಮತ್ತು ಭೌತಿಕ ಸ್ಥಿತಿಗಳ ಬಗ್ಗೆ IAF ಅಧಿಕಾರಿಗಳು ಟೆಸ್ಟ್ ನಡೆಸಿದ್ದಾರೆ. ಪಾಕ್ ಕಸ್ಟಡಿಯಲ್ಲಿದ್ದಾಗ ಮಾನಸಿಕ ಕಿರುಕುಳ ನೀಡಿದ್ದಾರೆ. ಆದರೆ, ದೈಹಿಕವಾಗಿ ಹಿಂಸೆ ನೀಡಿಲ್ಲವೆಂದು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಅಭಿನಂದನ್ ಉತ್ತರಿಸಿದ್ದಾರೆ.
ಪಾಕಿಸ್ತಾನ ನಮ್ಮ ಅಸಹಾಯಕತೆ ತೆರೆದಿಡಲು ವಿಡಿಯೋ ಮಾಡಿಕೊಂಡು ಇಷ್ಟ ಬಂದಂತೆ ಕಟ್ ಆ್ಯಂಡ್ ಪೇಸ್ಟ್ ಮಾಡಿ ಪ್ರಚಾರಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ ಅಂತ ಹೇಳಿದ್ದಾರೆ. ಅಭಿನಂದನ್ ಮತ್ತೆ ತನ್ನ ಪೈಲಟ್ ತಂಡ ಸೇರಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದ್ರೆ ತನ್ನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಒಂದು ಹಂತದಲ್ಲಿ ಸರಿ ಹೊಂದಿದ ಮೇಲೆ ಕಾರ್ಯನಿರ್ವಹಿಸಬಹುದು. ಸದ್ಯಕ್ಕೆ ಕೂಲ್ ಡೌನ್ ಟೆಸ್ಟ್ನಲ್ಲಿದ್ದರಿಂದ ತಕ್ಷಣಕ್ಕೆ ಕೆಲಸಕ್ಕೆ ಹೋಗುವುದು ಸರಿಯಲ್ಲ. ಅಧಿಕಾರಿಗಳು ವಿಚಾರಣೆ ನಡೆಸುವಾಗ ಅಭಿನಂದನ್ ತಕ್ಕ ಉತ್ತರಗಳನ್ನು ನೀಡಿ ದೇಶದ ಘನತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ ಎಂದು IAF ಅಧಿಕಾರಿಗಳು ಮೆಡಿಕಲ್ ಟೆಸ್ಟ್ ವೇಳೆ ತಿಳಿಸಿದ್ದಾರೆ……