ವಾಸ್ತು ಟಿಪ್ಸ್:
ಈಶಾನ್ಯ ಭಾಗವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಮನೆಯ ಸರ್ವಸಂಪನ್ನತೆಗೆ ಭಿನ್ನವಾದ ಸಾತ್ವಿಕ ಹಾಗೂ ತಾತ್ವಿಕ ಪುಷ್ಟಿಯನ್ನು ಒದಗಿಸುವ ಸ್ಥಳವಾಗಿದೆ.
*ಈ ಭಾಗ ತುಸು ತಗ್ಗಾಗಿ, ಇತರ ಭಾಗಗಳು ಈ ಭಾಗಕ್ಕಿಂತ ತುಸು ಎತ್ತರವಾಗಿರುವುದೇ ಸೂಕ್ತ. ಮನೆಯ ಬಾವಿ ನೀರಿನ ಸಂಪು, ನೀರಿನ ಕೊಳವೆಗಳು ಈ ಭಾಗದಲ್ಲಿ ಇರುವುದು ಸೂಕ್ತವಾಗುತ್ತದೆ.
*ಈ ಭಾಗದಲ್ಲಿ ಪೂಜಾಗೃಹವೂ ಸಮಾವೇಶಗೊಳ್ಳುವುದು ಹೆಚ್ಚು ಸೂಕ್ತ. ಇನ್ನು ಈಶಾನ್ಯ ಭಾಗದಲ್ಲಿ ಪೂಜಾಗೃಹ ಕಟ್ಟಲಾಗದಿದ್ದಲ್ಲಿ ಅದು ಮನೆಯ ಪೂರ್ವಭಾಗದಲ್ಲಿ ಸಮಾವೇಶವಾಗಲಿ.
*ಮನೆಯ ಹೊಸ್ತಿಲಿನ ಭಾಗ ಕೂಡ ಇಲ್ಲೇ ಇದ್ದರೆ ಎಲ್ಲ ರೀತಿಯಿಂದಲೂ ಒಳಿತು. ಮನೆಯ ಈಶಾನ್ಯ ಮೂಲೆ ಖುಲ್ಲಾ ಆಗಿದ್ದಲ್ಲಿ ಒಳ್ಳೆಯದು. ಈ ಮೂಲೆಯ ಮುಖಾಂತರ ಮಳೆ ನೀರಿನ ಧಾರೆ, ಬಚ್ಚಲ ನೀರೆಲ್ಲ ಭೂಮಿಯೊಳಗಡೆ ಅಂತರ್ಗತವಾಗಿ ಪೈಪುಗಳ ಮೂಲಕ ಸಾಗಿ ಹೋಗುವಂತಿದ್ದರೆ ಚೆನ್ನ.
*ಈಶಾನ್ಯ ಭಾಗದಲ್ಲಿ ಟೆರೇಸ್ ಮೇಲೆ ನೀರಿನ ತೊಟ್ಟಿ ಇರಬಾರದು. ಹಾಗೆಯೇ ಮಹಡಿಯನ್ನೂ ಕಟ್ಟಬಾರದು. ಈಶಾನ್ಯ ಮೂಲೆಯಲ್ಲಿ ಕಬ್ಬಿಣದ ವಸ್ತುಗಳಾಗಲೀ ಪೆಟ್ಟಿಗೆಗಳಾಗಲೀ ಇರಕೂಡದು. ಅಡುಗೆ ಮನೆಯಂತೂ ಈಶಾನ್ಯ ಭಾಗದಲ್ಲಿ ಬರಲೇಬಾರದು. ಇದು ತುಂಬಾ ಮುಖ್ಯ. ದಯಮಾಡಿ ಗಮನಿಸಿ. ಈಮೂಲೆಯಲ್ಲಿ ಸ್ನಾನಗೃಹ, ಶೌಚಾಲಯ, ಒಳಚರಂಡಿ ವ್ಯವಸ್ಥೆಗಳು ಬರಬಾರದು. ಇದನ್ನು ಮುಖ್ಯವಾಗಿ ಗಮನಿಸಬೇಕು.
*ಮಹಡಿಗೆ ಸಾಗುವ ಮೆಟ್ಟಿಲುಗಳು ಕೂಡ ಈಶಾನ್ಯ ಮೂಲೆಗೋ ಭಾಗಕ್ಕೋ ಬರದಿರಲಿ. ಹೊರ ಭಾಗದಿಂದಾಗಲೀ ಒಳಭಾಗದಿಂದಾಗಲೀ ಮಹಡಿ ಮೆಟ್ಟಿಲುಗಳನ್ನು ಕಟ್ಟಲೇ ಬೇಡಿ. ಕಟ್ಟುವುದೇ ಇದ್ದರೆ ಉತ್ತರದಿಂದ ದಕ್ಷಿಣಕ್ಕೆ ಮುಮ್ಮುಖವಾಗುವ ಹಾಗೆ ಕಟ್ಟಬೇಕು. ಹತ್ತಿ ಹೋಗುವಾಗ ಉತ್ತರದಿಂದ ದಕ್ಷಿಣದೆಡೆಗೆ ಸಾಗುವಂತಿರಬೇಕು. ಜತೆಗೆ ಈಶಾನ್ಯ ಭಾಗದಲ್ಲಿ ನಿಷ್ಪ್ರಯೋಜಕ ಸಾಮಗ್ರಿಗಳನ್ನು ಗುಂಪಾಗಿ ಕೂಡಿಡಬೇಡಿ…..