ಚಾಮರಾಜನಗರ:
ವೀರಶೈವವೂ ಲಿಂಗಾಯತ ಧರ್ಮದ ಒಳಪಂಗಡವಾದ್ದರಿಂದ ಅವರನ್ನು ಹೊರ ಹಾಕುವ ಪ್ರಶ್ನೆಯೇ ಇಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಇಳಕಲ್ನ ಚಿತ್ತರಗಿ ಮಹಾಸಂಸ್ಥಾನ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ, ರಾಷ್ಟ್ರೀಯ ಬಸವ ಸೇನೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ತಾಲೂಕಿನ ಮೇಲಾಜಿಪುರದಲ್ಲಿ ಡೇರಿ ರಾಜಶೇಖರಪ್ಪ ಅವರ ತೋಟದಲ್ಲಿ ನಿರ್ಮಿಸಿರುವ ಬಸವಾನುಭ ಮಂಟಪ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಿಂಗಾಯತ ಧರ್ಮದ 101 ಒಳಪಂಗಡಗಳಲ್ಲಿ ವೀರಶೈವವೂ ಒಂದಾಗಿದೆ. ಶೈವರಲ್ಲಿ 7 ವಿಧಗಳಿದ್ದು ಇದರಲ್ಲಿ ವೀರಶೈವ ಕೊನೆಯದಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಜಾತಿ ನಿರ್ಮೂಲನೆ ಮತ್ತು ಲಿಂಗ ತಾರತಮ್ಯ ಹೋಗಲಾಡಿಸಲು ಸ್ಥಾಪಿಸಿದ್ದ ಲಿಂಗಾಯತ ಧರ್ಮವನ್ನು ವೀರಶೈವರು ಸ್ವೀಕರಿಸಿ ಲಿಂಗಾಯತರಾದರು ಎಂದು ತಿಳಿಸಿದರು.
ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ವೀರಶೈವ ಮಹಾಸಭಾ 20 ವರ್ಷಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ವೀರಶೈವ ಸ್ವತಂತ್ರ ಧರ್ಮವಲ್ಲ ಶೈವದ ಒಂದು ಶಾಖೆ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತ್ತು. ಮತ್ತೆ 2 ಬಾರಿ ಮನವಿ ಮಾಡಿದಾಗಲೂ ನಿರಾಕರಿಸಿತ್ತು. ಬಳಿಕ ಮಹಾಸಭಾ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಮನವಿ ಮಾಡಲು ನಿರ್ಧಾರ ಕೈಗೊಂಡಿತ್ತು ಎಂದರು……