ಮಂಗಳೂರು:
ಶಿರಾಡಿ ಘಾಟ್ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ.ಆಗಸ್ಟ್‌ನಲ್ಲಿ ಭೂಕುಸಿತ ಬಳಿಕ ಘಾಟ್ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ರಸ್ತೆ ದುರಸ್ತಿ ಕೆಲಸ ನಡೆಯುತ್ತಿದ್ದು, ಶೀಘ್ರ ಎಲ್ಲ ರೀತಿಯ ವಾಹನಗಳಿಗೆ ರಸ್ತೆ ತೆರೆದುಕೊಳ್ಳಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಶಿರಾಡಿಯಲ್ಲಿ ಲಘು ವಾಹನಗಳ ಸಹಿತ ಬಸ್ ಸಂಚರಿಸುತ್ತಿದೆ. ಹಂತ ಹಂತವಾಗಿ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಮೊದಲಿಗೆ ಹಗಲು ವೇಳೆ ಮಾತ್ರ ಸಂಚಾರಕ್ಕೆ ಅನುಮತಿ ಸಿಗಲಿದ್ದು, ನಿಧಾನವಾಗಿ ರಾತ್ರಿ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ ವಾಹನ ಸಂಚಾರಕ್ಕೆ ಬೇಕಾದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರಂತೆ ಸರಕು ವಾಹನ ಸಂಚಾರ ಮುಕ್ತಗೊಳ್ಳಲಿದೆ. ಸದ್ಯದಲ್ಲಿಯೇ ದ.ಕ. ಹಾಗೂ ಹಾಸನ ಜಿಲ್ಲಾಧಿಕಾರಿಗಳು ಈ ಕುರಿತು ಅಧಿಕೃತ ಆದೇಶ ನೀಡಲಿದ್ದಾರೆ……