ಉಡುಪಿ:
ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಹೆಚ್ಡಿ ಕುಮಾರಸ್ವಾಮಿ ನಾಳೆ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಚಿಕಿತ್ಸೆ ಬಳಿಕ ಇಂದು ಉಡುಪಿಯಿಂದ ಚಿಕ್ಕಮಗಳೂರಿಗೆ ಆಗಮಿಸಲಿರುವ ಸಿಎಂ ಇಂದು ಸಂಕಲ್ಪ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಯಶಸ್ಸು ಹಾಗೂ ಶ್ರೇಯಸ್ಸುಗಾಗಿ ರುದ್ರ ಹೋಮ, ಗಣಪತಿ ಹೋಮ ಸಲ್ಲಿಸಲಿದ್ದಾರೆ. ಕೊಪ್ಪ ತಾಲೂಕಿನ ಕಮ್ಮರಡಿ ಬಳಿಯ ಕುಡ್ನಳ್ಳಿಯಲ್ಲಿರೋ ಉಮಾಮಹೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕೊಪ್ಪ ತಾಲೂಕಿನ ಗುಡ್ಡೇತೋಟದಲ್ಲಿರುವ ಜೆಡಿಎಸ್ ಕಾರ್ಯಕರ್ತ ರಂಗನಾಥ್ ಎಂಬುವರ ಎಸ್ಟೇಟ್‍ನಲ್ಲಿ ಇಂದು ಸಿಎಂ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಗ್ಗೆ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂಗೆ ತಂದೆ ಹೆಚ್.ಡಿ.ದೇವೇಗೌಡರು ಸಾಥ್ ನೀಡಲಿದ್ದಾರೆ. ಗಣೇಶ್ ಸೋಮಾಯಜಿ ಸೂಚನೆ ಮೇರೆಗೆ ಸಿಎಂ ಪೂಜೆ ಸಲ್ಲಿಸಲಿದ್ದಾರೆ. …