ಸಿನಿಮಾ:
ಯುವರಾಜ ನಿಖಿಲ್ ಕುಮಾರ್ ಅಭಿನಯದ ಎರಡನೇ ಸಿನಿಮಾ ‘ಸೀತಾರಾಮ ಕಲ್ಯಾಣ’ ನಾಳೆ ತೆರೆ ಮೇಲೆ ಬರ್ತಿದೆ..ಸೀತಾರಾಮ ಕಲ್ಯಾಣ ಸಿನಿಮಾ ಒಂದು ಪವರ್ ಪ್ಯಾಕ್ ಪೈಸಾ ವಸೂಲ್ ಸಿನಿಮಾ, ಚೆನ್ನಾಂಬಿಕ ಫಿಲಂಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಿಖಿಲ್‌ಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದು ನಾಳೆ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗುತ್ತದೆ…
ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಸಿನಿಮಾದ ಟ್ರೇಲರ್ ಈಗಾಗಲೇ ಧೂಳೆಬ್ಬಿಸಿದ್ದ,ಟ್ರೇಲರ್ ಬಿಡುಗಡೆ ಮುನ್ನ ಇದು ಆ್ಯಕ್ಷನ್ ಸಿನಿಮಾ ಎಂದು ಜನ ತಿಳಿದುಕೊಂಡಿದ್ದರು, ಆದರೆ ಇದರಲ್ಲಿ ಆ್ಯಕ್ಷನ್‌ಗಿಂತಲೂ ಬಹಳ ಮುಖ್ಯವಾದ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್, ಎಮೋಷನ್ಸ್ , ಕಾಮಿಡಿ ಜೊತೆಗೆ ಸುಂದರವಾದ ಪ್ರೇಮ ಕಥೆಯಿದೆ. ಇದೆಲ್ಲದರ ಜತೆ ಮಾಸ್ ಪ್ರೇಕ್ಷಕರು ಇಷ್ಟಪಡುವಂಥ ಭರ್ಜರಿ ಫೈಟ್‌ಗಳಿವೆ.ಸಾಧುಕೋಕಿಲಾ, ಚಿಕ್ಕಣ್ಣ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ, ಶಿವರಾಜ್ ಕೆ ಆರ್ ಪೇಟೆ ಅವರ ಕಾಮಿಡಿ ಕಮಾಲ್ ಕೂಡಾ ಇದೆ. ಇದೆಲ್ಲವುದರ ಜತೆಗೆ ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ರವಿಶಂಕರ್ ಸಹ ಕಾಮಿಡಿ ಮಾಡಿದ್ದಾರೆ…..