Breaking News

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಸ್ಪತ್ರೆಗೆ ದಾಖಲು..!

ತೀವ್ರ ಜ್ವರದಿಂದ ಬಳಲುತ್ತಿರುವ ಶಿವಣ್ಣ.....

SHARE......LIKE......COMMENT......

ಬೆಂಗಳೂರು:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ನಗರದ ಮಲ್ಯ ಆಸ್ಪತ್ರೆ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಶಿವಣ್ಣ ಅವರು ನಿನ್ನೆ ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.  ಕುಟುಂಬಸ್ಥರೆಲ್ಲರು ಶಿವಣ್ಣನ ಜೊತೆಗಿದ್ದಾರೆ ಎಂದು ಹೇಳಲಾಗಿದೆ.
ನಾನು ಆರೋಗ್ಯವಾಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯ ಜ್ವರ ಯಾರಿಗೆ ಬರಲ್ಲ ಹೇಳಿ. ಎಲ್ಲ ಮನುಷ್ಯನಿಗೂ ಜ್ವರ ಬರುತ್ತೆ. ಅದೇ ರೀತಿ ನನಗೂ ಬಂದಿದೆ. ಅಭಿಮಾನಿಗಳ ಪ್ರೀತಿ, ಆಶೀರ್ವಾದದಿಂದ ಈಗ ಹುಷಾರಾಗಿದ್ದೇನೆ. ಯಾವುದೇ ಸಮಸ್ಯೆಯಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಮಲ್ಯ ಆಸ್ಪತ್ರೆ ವೈದ್ಯ ವಿ.ಕೆ.ಶ್ರೀನಿವಾಸ್ ಅವರು, ಅವರಿಗೆ ಸಣ್ಣ ಜ್ವರ ಬಂದಿತ್ತು. ಎಲ್ಲ ರೀತಿಯ ಟೆಸ್ಟ್ ಮಾಡಿದ್ದೇವೆ. ನಾರ್ಮಲ್ ಆಗಿದೆ. ಅವರನ್ನು ನಾಳೆ ಡಿಸ್ಚಾರ್ಜ್ ಮಾಡುತ್ತೇವೆ ಎಂದರು…..