ಮಿಚಿಗನ್:
ಅಮೆರಿಕಾದ ಖಾಸಗಿ ಕಂಪನಿಯೊಂದು ಕ್ರಿಸ್ಮಸ್ ಬೋನಸ್ ಆಗಿ ಪ್ರತಿ ನೌಕರನಿಗೆ ತಲಾ $20,000 ಅಂದರೆ ಸುಮಾರು 14 ಲಕ್ಷ ನೀಡಿದೆ.. ಕರಕುಶಲ ಮತ್ತು ಹೂವಿನ ಕಂಪೆನಿಯಾದ ಫ್ಲೋರಾಕ್ರಾಫ್ಟ್ ತನ್ನ ಕಂಪನಿಯ 200 ಉದ್ಯೋಗಿಗಳಿಗೆ ನೀಡಿರುವ ಒಟ್ಟು ಬೋನಸ್ ಮೊತ್ತ 4 ಮಿಲಿಯನ್ .
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಯೋ ಶ್ಕೊನೆರ್ ಕರ್ತವ್ಯನಿಷ್ಠೆಯಿಂದ ದುಡಿಯುವ ನೌಕರಿಗೆ ಉತ್ತೇಜನದ ರೂಪದಲ್ಲಿ ಬೋನಸ್ ನೀಡಲಾಗುತ್ತದೆ. ಈ ಮೂಲಕ ನಿಮ್ಮ ಕಠಿಣ ಕೆಲಸವನ್ನು ನಾವು ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಕೆಲಸದ ಅವಧಿಯನ್ನು ಪರಿಗಣಿಸಿ ಬೋನಸ್ ನಿರ್ಧರಿಸಲಾಗಿದೆ. 40 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವವರಿಗೆ $60,000 ಅಂದರೆ ಸುಮಾರು 42 ಲಕ್ಷ ನೀಡಲಾಗುತ್ತದೆ. ಕನಿಷ್ಠವೆಂದರೆ 14 ಲಕ್ಷ ರೂಪಾಯಿ ಎಂದರು……..