Breaking News

2 ದಿನ ದೆಹಲಿಯಲ್ಲೇ ಉಳಿಯಲ್ಲಿದ್ದಾರೆ ಡಿಕೆಶಿ..!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆ ....

SHARE......LIKE......COMMENT......

ಬೆಂಗಳೂರು:

ನಿನ್ನೆ ಹೈಕೋರ್ಟ್ ಜಾಮೀನು ನೀಡಿದ ಬಳಿಕ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದು ನಿನ್ನೆ ಬಿಡುಗಡೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ಬರುವುದು ಇನ್ನು ಎರಡು ದಿನ ತಡವಾಗಲಿದೆ. ಬಿಡುಗಡೆಯಾದ ತಕ್ಷಣ ಬೆಂಗಳೂರಿಗೆ ಬರುತ್ತಾರೆ. ಅವರನ್ನು ಏರ್ ಪೋರ್ಟ್ ನಿಂದ ಮನೆಯವರೆಗೂ ಮೆರವಣಿಗೆಯಲ್ಲಿ ಕರೆತರಬೇಕೆಂದು ಅಭಿಮಾನಿಗಳು ಸಿದ್ದತೆ ನಡೆಸಿದ್ದರು. ಆದರೆ, ಇದ್ಯಾವುದಕ್ಕೂ ಅವಕಾಶ ನೀಡದ ಡಿ.ಕೆ.ಶಿವಕುಮಾರ್ ಅವರು, ಮೆರವಣಿಗೆ ಬೇಡ ಎಂದು ಮನವಿ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ದಾಖಲಿಸಿರುವ ಪ್ರಕರಣವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಎದುರಿಸಬೇಕು, ನ್ಯಾಯಾಲಯದ ವಾದ-ವಿವಾದದಲ್ಲಿ ಜಾರಿ ನಿರ್ದೇಶನಾಲಯ ಮಾಡಿದ ಆರೋಪಗಳೇನು ? ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಯಾವುವು ಎಂಬೆಲ್ಲಾ ಮಾಹಿತಿಗಳನ್ನು ಡಿ.ಕೆ.ಶಿವಕುಮಾರ್ ಇನ್ನು ಎರಡು ದಿನ ದೆಹಲಿಯಲ್ಲೇ ಉಳಿದು ವಕೀಲರೊಂದಿಗೆ ಚರ್ಚಿಸಿ ದಾಖಲೆ ಸಲ್ಲಿಸಲಿದ್ದಾರೆ. ಹೈಕೋರ್ಟ್ ನೀಡಿದ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದರ ವಿಚಾರಣೆ ಇಂದು ನಡೆಯುತ್ತಿದೆ. ಬಹುತೇಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯುವ ವಿಶ್ವಾಸ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗಿದೆ.  ಒಂದು ವೇಳೆ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದೇ ಆದರೆ ಮತ್ತೆ ಬಂಧನಕ್ಕೊಳಗಾಗಬೇಕಾಗುತ್ತದೆ…..