ನವದೆಹಲಿ:
ದೇಶದಲ್ಲೇ ಮೊದಲ ಬಾರಿಗೆ ಸಿಬಿಐ ಮುಖ್ಯ ಕಚೇರಿ ಮೇಲೆಯೇ ರೇಡ್ ನಡೆದಿದೆ.ದೇಶದ ಉನ್ನತ ತನಿಖಾ ಸಂಸ್ಥೆ ಸಿಬಿಐನಲ್ಲೇ ವಿಚಿತ್ರ ಬೆಳವಣಿಗೆ. ಸಿಬಿಐನ ಮುಖ್ಯಸ್ಥರು ಮತ್ತು ವಿಶೇಷ ನಿರ್ದೇಶಕರ ನಡುವಿನ ಮುಸುಕಿನ ಗುದ್ದಾಟ ಇದೀಗ ಹೊಸ ಸವಾಲು ತಂದೊಡ್ಡಿದೆ. ಸಿಬಿಐ ಕೇಂದ್ರ ಕಚೇರಿಯ ಮೇಲೆಯೇ ಮಧ್ಯಂತರ ವಿಶೇಷ ನಿರ್ದೇಶಕರು ರೇಡ್ ಮಾಡಿದ್ದಾರೆ.
ದೆಹಲಿಯಲ್ಲಿರುವ ಸಿಬಿಐ ಕಚೇರಿಯ 10 ಮತ್ತು 11ನೇ ಮಹಡಿಯಲ್ಲಿರುವ ಮುಖ್ಯಸ್ಥರು ಮತ್ತು ವಿಶೇಷ ನಿರ್ದೇಶಕರ ಕಚೇರಿಗಳನ್ನು ಸೀಲ್ ಮಾಡಲಾಗಿದೆ. ಯಾವುದೇ ಸಿಬ್ಬಂದಿಯನ್ನೂ ಒಳ ಬಿಡಲಾಗುತ್ತಿಲ್ಲ. ಮಾಂಸ ರಫ್ತು ಪ್ರಕರಣದಲ್ಲಿ ಕ್ಲೀನ್ ಚಿಟ್ ಕೊಡಲು 2 ಕೋಟಿ ಹಣ ಪಡೆದ ಪ್ರಕರಣ ಸಿಬಿಐನ ಇಬ್ಬರು ಹಿರಿಯರಿಗೇ ತಲೆ ನೋವು ತಂದಿದೆ.
ಸರ್ಕಾರ ಈಗಾಗಲೇ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನರನ್ನು ಕಡ್ಡಾಯ ರಜೆ ಮೇಲೆ ಕಳಿಸಿದೆ. ಅಲ್ಲದೇ ಸಿಬಿಐನ ವಿಶೇಷ ಮಧ್ಯಂತರ ನಿರ್ದೇಶಕರನ್ನಾಗಿ ಎಂ.ನಾಗೇಶ್ವರರಾವ್ ಅವರನ್ನು ನೇಮಕ ಮಾಡಿದೆ. ರಾವ್ ನೇತೃತ್ವದ ತಂಡ ಇದೀಗ ಸಿಬಿಐ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದೆ…….