ಧಾರವಾಡ:
ಎಸ್‌ಡಿಎಂ ಮೆಡಿಕಲ್ ಕಾಲೇಜ್ ಧಾರವಾಡಧಲ್ಲಿ 66 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ನಲ್ಲಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಹಾಸ್ಟೆಲ್ ಸುತ್ತಲೂ ನಿರ್ಬಂಧಿತ ಪ್ರದೇಶ ಎಂದು ಆಡಳಿತ ಮಂಡಳಿ ಘೋಘಿಸಿದೆ. ಇತ್ತೀಚಿಗೆ ಕೆಲವು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇನ್ನು, ಕಾಲೇಜಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ DHO ಯಶವಂತ ಭೇಟಿ ಪರಿಶೀಲನೆ ನಡೆಸಿದ್ರು. ಯಾರೂ ಕೂಡಾ ಹೊರಗಡೆ ಬರದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ…..