ನವದೆಹಲಿ:
ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಮತ್ತೊಂದು ಸಾಧನೆಗೆ ಸಜ್ಜಾಗಿದೆ. ಜನವರಿ 24ರಂದು ‘ಕಲಂಸಟ್ ಪ್ಲೇಲೋಡ್’ ಸಹಿತ PSLV C44 ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ಮಾಡಲು ಇಸ್ರೋ ಮುಂದಾಗಿದೆ.
PSLV C44 ನೌಕೆಯೊಂದಿಗೆ ಮೈಕ್ರೋಸ್ಯಾಟ್-ಆರ್ ಸ್ಯಾಟೆಲೈಟ್ ಕೂಡಾ ಉಡಾವಣೆಯಾಗಲಿದೆ. ಇದೇ ಮೊದಲ ಬಾರಿಗೆ ‘ಕಲಂಸಟ್ ಪ್ಲೇಲೋಡ್’ ಇಂಧನವನ್ನು ಉಡಾವಣೆಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಈ ಹಿಂದೆ ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಹೀಗಾಗಿ ಇದೇ 24ರಂದು ಇಸ್ರೋ ಉಡಾವಣೆಗೆ ಸಜ್ಜಾಗಿದೆ….