Breaking News

ಖಾಸಗಿ ವಾಹನಗಳ ಮೇಲೆ ಸರ್ಕಾರ, ನಿಗಮ ಮಂಡಳಿಗಳ ಹೆಸರು ಹಾಕುವಂತಿಲ್ಲ..!

ಸಂಸ್ಥೆಗಳ ಹೆಸರಿದ್ರೆ ದಂಡ ಹಾಕಲು ಸೂಚನೆ....

SHARE......LIKE......COMMENT......

ಬೆಂಗಳೂರು:

ಖಾಸಗಿ ವಾಹನಗಳ ಮೇಲೆ ಸರ್ಕಾರಿ ಲಾಂಛನ ತೆರವಿಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್​ ಖಡಕ್ ಸುತ್ತೋಲೆ ಹೊರಡಿಸಿದ್ದಾರೆ. ಖಾಸಗಿ ವಾಹನಗಳ ಮೇಲೆ ಸರ್ಕಾರ, ನಿಗಮ ಮಂಡಳಿಗಳ ಹೆಸರು ಹಾಕುವಂತಿಲ್ಲ, ವಾಹನದ ಮೇಲೆ ಸರ್ಕಾರ, ಸಂಸ್ಥೆಗಳ ಹೆಸರಿದ್ರೆ ದಂಡ ಹಾಕಲು ಸೂಚನೆ ನೀಡಲಾಗಿದೆ. ಲಾಂಛನ ಹಾಕಿದ್ರೆ, ದಂಡ ಹಾಕಿ, ಲಾಂಛನ ಹಾಗೂ ಹೆಸರು ತೆಗೆಸಬೇಕಾಗಿದ್ದು, ಮೇ 24ರ ಒಳಗೆ ತೆರವಿನ ಅಭಿಯಾನ ಆರಂಭಿಸಲು ಸೂಚನೆ ನೀಡಲಾಗಿದೆ. ಹಲವು ನೌಕರರು, ಸಿಬ್ಬಂದಿ ಸರ್ಕಾರದ ಲಾಂಛನ ಹೆಸರು ಹಾಕಿದ್ದಾರೆ, ಈ ಹಿನ್ನೆಲೆ ಖಾಸಗಿ ವಾಹನಗಳ ಮೇಲೆ ಸರ್ಕಾರಿ ಲಾಂಛನ ತೆರವಿಗೆ ಸೂಚನೆ ನೀಡಲಾಗಿದೆ……