Breaking News

ಕೇಂದ್ರದಿಂದ ವಾಹನ ಸವಾರರಿಗೆ ಸಿಹಿ ಸುದ್ದಿ: ತೈಲ ಬೆಲೆಯಲ್ಲಿ ಭಾರೀ ಇಳಿಕೆ..!

ತೈಲ ಬೆಲೆಯಲ್ಲಿ ದಿಢೀರ್‌ ಕುಸಿತ....

SHARE......LIKE......COMMENT......

ಬೆಂಗಳೂರು:

ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ತೈಲ ಬೆಲೆ ಇದೀಗ ದಿಢೀರ್‌ ಕುಸಿತ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೇಂದ್ರ ಸರ್ಕಾರ ಕಳೆದ ದಿನ ಸುಂಕ ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಈ ಘೋಷಣೆಯು ದೇಶದಲ್ಲಿ ಕಂಡುಬರುತ್ತಿರುವ ಹಣ ದುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಬಹುದು.

ಕಳೆದ ದಿನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, “ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ ಮತ್ತು ಡೀಸೆಲ್‌ಗೆ 6 ರೂಪಾಯಿಯಷ್ಟು ಕಡಿತಗೊಳಿಸಲಾಗುತ್ತಿದೆ. ಈ ಮೂಲಕ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ ರೂ. 9.5 ಮತ್ತು ಡೀಸೆಲ್‌ ದರದಲ್ಲಿ ರೂ. 7 ಕಡಿಮೆಯಾಗಲಿದೆ” ಎಂದು ಘೋಷಿಸಿದ್ದರು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌-ಡೀಸೆಲೆ ಬೆಲೆ ಇಂತಿದೆ.

ನಗರ ಪೆಟ್ರೋಲ್‌ ಡೀಸೆಲ್‌

ನವದೆಹಲಿ 96.72 ರೂ 89.62 ರೂ.
ಕೊಲ್ಕತ್ತಾ 106.03 ರೂ. 92.76 ರೂ
ಮುಂಬೈ 111.35 ರೂ 97.28 ರೂ
ಚೆನ್ನೈ 102.63 ರೂ. 94.24 ರೂ.
ಗುರುಗಾಂ 97.18 ರೂ 90.05 ರೂ.
ಹೈದರಾಬಾದ್‌ 109.66 ರೂ 97.82 ರೂ
ಬೆಂಗಳೂರು 101.94 ರೂ 87.89 ರೂ.

ಎಸ್‌ಎಂಎಸ್‌ ಮೂಲಕ ದರ ಪರಿಶೀಲಿಸಬಹುದು :

ನೀವು ಎಸ್‌ಎಂಎಸ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸಹ ತಿಳಿಯಬಹುದು ಇಂಡಿಯನ್ ಆಯಿಲ್ ಗ್ರಾಹಕರು RSP ಅನ್ನು 9224992249 ಸಂಖ್ಯೆಗೆ ಕಳುಹಿಸುವ ಮೂಲಕ ಮತ್ತು BPCL ಗ್ರಾಹಕರು RSP ಅನ್ನು 9223112222 ಸಂಖ್ಯೆಗೆ ಕಳುಹಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದೆ ವೇಳೆ, HPCL ಗ್ರಾಹಕರು HPPrice ಅನ್ನು 9222201122 ಸಂಖ್ಯೆಗೆ ಕಳುಹಿಸುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು……