ಗೋವಾ:
ಸಿನಿಮಾ ಸ್ಟಾರ್ಗಳೆಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಅಭಿಮಾನ.. ಅದರಲ್ಲೂ ತಮ್ಮ ನೆಚ್ಚಿನ ನಟ-ನಟಿ ಸಿಕ್ರೆ ಅವ್ರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಹಾತೊರೆಯುವವರೇ ಹೆಚ್ಚು. ಆದ್ರೆ, ತಮಗೆ ಇಷ್ಟವಿಲ್ದೇ, ಸೆಲ್ಪಿಗೆ ಮುಂದಾದ್ರೆ ಸ್ಟಾರ್ ನಟರ ರಿಯಾಕ್ಷನ್ ಹೇಗಿರುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಫಲ್. ಗೋವಾದ ವಿಮಾನ ನಿಲ್ದಾಣದಿಂದ ಬಾಲಿವುಡ್ ಸ್ಟಾರ್ ಸಲ್ಮಾನ್ ಹೊರಗೆ ಬರ್ತಿದ್ದ ವೇಳೆ ಅಭಿಮಾನಿಯೊಬ್ಬ ಸೆಲ್ಫಿಗೆ ಯತ್ನಿಸಿದ್ದ. ಅಭಿಮಾನಿಯ ವರ್ತನೆಯಿಂದ ಕುಪಿತಗೊಂಡ ಸುಲ್ತಾನ್ ಆತನ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್ ಕಸಿದುಕೊಂಡ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ……