ಸಿಡ್ನಿ :
19ರ ಹರೆಯದ ಭರವಸೆಯ ಯುವ ದಾಂಡಿಗ ಪೃಥ್ವಿ ಶಾ ಗಾಯಗೊಂಡಿರುವುದನ್ನು ಬಿಸಿಸಿಐ ದೃಢ ಪಡಿಸಿದೆ.ಅಭಿಮಾನಿಗಳೆಲ್ಲರ ನಿರಾಶೆಗೆ ಕಾರಣವಾಗುವ ರೀತಿಯಲ್ಲಿ ಆತಿಥೇಯ ಆಸ್ಟ್ರೇಲಿಯ ಎದುರಿನ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಆ್ಯಡಿಲೇಡ್ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮ್ಯಾನ್ ಪೃಥ್ವಿ ಶಾ ಅವರು ಮೊಣಕೈ ಗಾಯಕ್ಕೆ ಗುರಿಯಾಗಿ ತಂಡದಿಂದ ಹೊರಬಿದ್ದಿದ್ದಾರೆ.
ಪ್ರಥ್ವಿ ಶಾ ಅವರು ತೀವ್ರತಮ ನಿಗಾವಣೆಯ ಪುನಶ್ಚೇತನ ಪ್ರಕ್ರಿಯೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ಬಿಸಿಸಿಐ ಹೇಳಿದೆ.ಶಾ ಅವರಿಗೆ ಸ್ಕ್ಯಾನ್ ನಡೆಸಲಾಗಿದೆ. ಅವರಿಗೆ ಲ್ಯಾಟರಲ್ ಲಿಗಾಮೆಂಟ್ ಇಂಜ್ಯುರಿ ಆಗಿದೆ ಎಂಬುದು ಸ್ಕ್ಯಾನ್ ನಲ್ಲಿ ಗೊತ್ತಾಗಿದೆ. ಹಾಗಾಗಿ ಅವರು ಆ್ಯಡಿಲೇಡ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರು’ ಎಂದು ಬಿಸಿಸಿಐ ಹೇಳಿದೆ……