Breaking News

ಕಾಫಿ ಡೇ ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ….

4ನೇ ಸುತ್ತಿನ ರೇಸ್‌ಗೆ ಚಾಲನೆ....

SHARE......LIKE......COMMENT......

ಚಿಕ್ಕಮಗಳೂರು: 

ಕಾಫಿ ಡೇ ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ ಚಾಂಪಿಯನ್‌ಶಿಪ್‌ನ 4ನೇ ಸುತ್ತಿನ ರೇಸ್‌ಗೆ ಶುಕ್ರವಾರ ಪ್ರೇಕ್ಷಕರ ಹಂತದ ಸ್ಪರ್ಧೆಯ ಮೂಲಕ ಚಾಲನೆ ನೀಡಲಾಯಿತು.

ನಗರದ ಆಂಬರ್‌ ವ್ಯಾಲಿ ಶಾಲೆ ಆವರಣದಲ್ಲಿ  ಶುಕ್ರವಾರ ಮಧ್ಯಾಹ್ನ  2.30ಕ್ಕೆ  ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸೂಪರ್‌ ಸ್ಪೆಷಲ್‌ ಕ್ಲಾಸ್‌ ವಿಭಾಗದ ಸ್ಪರ್ಧೆಗಳು ಶ್ರೇಯಾಂಕ ರಹಿತ ಚಾಲಕರಿಂದ ಆರಂಭವಾಯಿತು. ಪ್ರೇಕ್ಷಕರ ಸುತ್ತಿನ ಸ್ಪರ್ಧೆಯಲ್ಲಿ 5 ಬಾರಿ ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಡ ಗೌರವ್‌ ಗಿಲ್‌ ಮತ್ತು ಮೂಸಾ ಷರೀಫ್‌ ಜೋಡಿ 2.19 ಕಿ.ಮೀ. ದೂರವನ್ನು 2 ನಿಮಿಷ 34.7 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮೊದಲ ದಿನದ ಗೌರವ ಪಡೆದುಕೊಂಡರು.ಅಮಿತ್‌ ರಜತ್‌ ಘೋಷ್‌ ಹಾಗೂ ಅಶ್ವಿ‌ನ್‌ ನಾಯಕ್‌ 2 ನಿಮಿಷ 35.1 ಸೆಕೆಂಡುಗಳಲ್ಲಿ ಕ್ರಮಿಸಿ ಎರಡನೇ ಸ್ಥಾನವನ್ನು ಹಾಗೂ ಕರ್ಣ ಕಡೂರು ಮತ್ತು ನಿಖೀಲ್‌ ಪೈ ಜೋಡಿ 2 ನಿಮಿಷ 36.1 ಸೆಕೆಂಡುಗಳಲ್ಲಿ ನಿಗದಿತ ದೂರ ಪೂರ್ಣಗೊಳಿಸಿ 3ನೇ ಸ್ಥಾನ ಪಡೆದುಕೊಂಡರು.

ಐ.ಎನ್‌.ಆರ್‌.ಸಿ. 1 ವಿಭಾಗದಲ್ಲಿ ಗೌರವ್‌ ಗಿಲ್‌ ಮತ್ತು ಮೂಸಾ ಷರೀಫ್‌ ಜೋಡಿ ಮೊದಲ ಸ್ಥಾನ ಪಡೆದರೆ, ಅಮಿತ್‌ ರಜತ್‌ ಘೋಷ್‌ ಮತ್ತು ಅಶ್ವಿ‌ನ್‌ ನಾಯಕ್‌ ಜೋಡಿ ಎರಡನೇ ಸ್ಥಾನ ಪಡೆಯಿತು. ರ‍್ಯಾಲಿಯ ಎರಡನೇ ದಿನವಾದ ಶನಿವಾರ ಮೂಡಿಗೆರೆ ಮತ್ತು ಬೇಲೂರು ತಾಲೂಕಿನ ಕಾಫಿ ತೋಟಗಳ ಮಣ್ಣಿನ ರಸ್ತೆಯಲ್ಲಿ ರೇಸ್‌ ನಡೆಯಲಿದೆ……