ಸಂಡೂರು:
ಬಳ್ಳಾರಿ ಜಿಲ್ಲೆಯ ಪ್ರತಿ ಮಗುವಿಗೂ ಸಹ ಶ್ರೀರಾಮುಲು ಯಾರು? ಹೇಗೆ ಎನ್ನುವುದು ಗೊತ್ತಿದೆ. ಇಡೀ ಕ್ಯಾಬಿನೆಟ್ ಬಳ್ಳಾರಿಯಲ್ಲಿ ಟೆಂಟ್ ಹಾಕಿದರೂ ಯಾವುದೇ ಪ್ರಯೋಜನವಾಗಲ್ಲ. ಇಲ್ಲಿಯ ಜನ ನನ್ನ ಕೈ ಬಿಡುವುದಿಲ್ಲ, ಗೆಲ್ಲಿಸುತ್ತಾರೆ ಎಂದು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಚೋರುನೂರು ಗ್ರಾಮದಲ್ಲಿ ಮಂಗಳವಾರ ನಡೆದ ಬಹಿರಂಗ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮಾಡಿದ ಪ್ರತಿಯೊಂದು ಕೆಲಸವೂ ಸಹ ಇಂದು ಜನಪರವಾಗಿದೆ. ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ, ಇತರ ಯೋಜನೆಗಳು ಜನತೆಗೆ ಉಪಯೋಗವಾಗಿವೆ. ಅತಿ ಹೆಚ್ಚು ಅನುದಾನ ವನ್ನು ಬಳ್ಳಾರಿಗೆ ತಂದು ಅಭಿವೃದಿ ಪಡಿಸಿದ್ದೇವೆ. ಮೋದಿಯವರು ಇಡೀ ದೇಶದ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದಾರೆ. ಬಳ್ಳಾರಿಗೆ ಡಿಕೆಶಿಯಾಗಲಿ, ಕ್ಯಾಬಿನೆಟ್ ಆಗಲಿ ಬಂದು ಏನೂ ಮಾಡಲಾರದು. ಅವರಿಗೆ ಅತಿ ಹೆಚ್ಚು ಸೋಲುವ ಭಯದಿಂದಲೇ ಇಲ್ಲಿಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು……