ರಾಮನಗರ :
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಕರ್ನಾಟಕದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ..
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದು,ಸುರೇಶ್ ಅವರ ಆಸ್ತಿ 5 ವರ್ಷಗಳಲ್ಲಿ ಬರೋಬ್ಬರಿ ಏರಿಕೆಯಾಗಿದೆ. 2014 ರ ಚುನಾವಣೆ ವೇಳೆ 85 ಕೋಟಿ ರೂಪಾಯಿಯ ಆಸ್ತಿ ಘೋಷಿಸಿದ್ದ ಅವರು ಈ ಬಾರಿ 338 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ.ಅದರಲ್ಲಿ 33 ಕೋಟಿ ರೂಪಾಯಿ ಚರಾಸ್ತಿ , 305 ಕೋಟಿ ರೂಪಾಯಿ ಸ್ಥಿರಾಸ್ತಿ ಸೇರಿ ಒಟ್ಟು 338 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಗೂ ಬರೋಬ್ಬರಿ 51.93 ಕೋಟಿ ರೂಪಾಯಿ ಸಾಲವನ್ನು ಸಂಸದ ಸುರೇಶ್ ತೋರಿಸಿದ್ದಾರೆ. ಇದರಲ್ಲಿ1 ಕೆ.ಜಿ 260 ಗ್ರಾಂ ಚಿನ್ನ , 4 ಕೆ.ಜಿ ಬೆಳ್ಳಿ ಸಂಸದರ ಬಳಿ ಇದೆ ಡಿಕ್ಲೇರ್ ಮಾಡಿಕೊಂಡಿದ್ದಾರೆ….