ಲಖನೌ:
ಕಾಂಗ್ರೆಸ್ ಜತೆ ಬಿಎಸ್ಪಿ ಮೈತ್ರಿ ಕಟ್..!! ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬೆಂಬಲ ಹಿಂಪಡೆಯಲು ಚಿಂತನೆ … ಯೆಸ್ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನೂತನವಾಗಿ ರಚನೆಯಾದ ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಬಹುಜನ ಸಮಾಜವಾದಿ ಪಾರ್ಟಿ ನಾಯಕಿ ಮಾಯಾವತಿ ಚಿಂತನೆ ನಡೆಸಿದ್ದಾರೆ.
ಇದ್ದಕ್ಕೆಲ್ಲಾ ಕಾರಣ ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ಉಭಯ ರಾಜ್ಯಗಳಲ್ಲಿ ‘ಕೆಲವು ಅಮಾಯಕರ’ ಮೇಲೆ ಪ್ರಕರಣ ದಾಖಲಾಗಿದೆ. ಅವುಗಳನ್ನು ರದ್ದುಪಡಿಸಬೇಕು ಹಾಗೂ ಬಾಕಿ ಉಳಿದಿರುವ ಎಲ್ಲ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಬಿಎಸ್ಪಿ ಬೆಂಬಲವನ್ನು ವಾಪಸ್ ಎಂದು ಮಾಯಾವತಿ ವಾರ್ನ್ ನೀಡಿದ್ದಾರೆ……