ಕೋಲಾರ:
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ನಗರಸಭೆಗೆ ಎಸ್ಎಫ್ಸಿ ಅನುದಾನ 1.50 ಕೋಟಿ ರೂ. ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ಕೋಲಾರಮ್ಮ ಕೆರೆ ಅಂಗಳದಲ್ಲಿ ದುರಸ್ತಿಗೊಳಿಸಿರುವ ನಗರಸಭೆಯ ಯುಜಿಡಿಯ ಎಸ್ಟಿಪಿ ಘಟಕವನ್ನು ಶನಿವಾರ ಪರೀಕ್ಷಾರ್ಥ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಎಸ್ಎಫ್ಸಿ ಅನುದಾನವನ್ನು ಹೊಸ ಬೋರ್ವೆಲ್ ಕೊರೆದು ಪಂಪ್ ಮೋಟಾರ್, ಪೈಪ್ಲೈನ್ಗೆ ಬಳಸಲು ಸೂಚಿಸಲಾಗಿದೆ. ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ಕಂಟ್ರೋಲ್ ರೂ. ಸ್ಥಾಪಿಸಲಾಗಿದೆ ಎಂದರು.
ನಗರದ 16 ವಾರ್ಡ್ಗಳಲ್ಲಿನ ಯುಜಿಡಿ ತ್ಯಾಜ್ಯನೀರನ್ನು ಪಂಪ್ ಮಾಡುವ ಎಸ್ಟಿಪಿ ಘಟಕ ಹಲವು ತಿಂಗಳ ಹಿಂದೆ ಕೆಟ್ಟು ಹೋಗಿ ಸಮಸ್ಯೆ ಉಲ್ಬಣಿಸಿತ್ತು. 2017-18ನೇ ಸಾಲಿನ ಎಸ್ಎಫ್ಸಿ ಅನುದಾನ 18 ಲಕ್ಷ ರೂ. ವೆಚ್ಚದಲ್ಲಿ ಘಟಕ ದುರಸ್ತಿಪಡಿಸಲಾಗಿದೆ. ಯುಜಿಡಿಗೆ ಮರುಸಂಪರ್ಕ ಕಲ್ಪಿಸಿದ ನಂತರ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಘಟಕ ಕಾರ್ಯನಿರ್ವಹಿಸಲಿದೆ ಎಂದರು…..