Breaking News

ಮಹಾತ್ಮ ಗಾಂಧೀಜಿ ಸ್ತಬ್ಧಚಿತ್ರಕ್ಕೆ ಅದ್ಧೂರಿ ಸ್ವಾಗತ..!

150ನೇ ಜನ್ಮ ವರ್ಷಾಚರಣೆ ಆಚರಿಸಿದ ವಾರ್ತಾ ಇಲಾಖೆ....

SHARE......LIKE......COMMENT......

ವಿಜಯಪುರ:

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ನಗರಕ್ಕೆ ಆಗಮಿಸಿದ್ದು ಅದ್ಧೂರಿ ಸ್ವಾಗತ ನೀಡಲಾಯಿತು.

ಶುಕ್ರವಾರ ನಗರಕ್ಕೆ ಆಗಮಿಸಿದ ಗಾಂಧೀಜಿ ಸ್ತಬ್ಧ ಚಿತ್ರ ವಾಹನವನ್ನು ಅಥಣಿ ರಸ್ತೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಗಾಂಧೀಜಿ ಸ್ತಬ್ಧಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಮಹಾತ್ಮ ಗಾಂಧೀಜಿ ಅವರ ಆದರ್ಶ, ತ್ಯಾಗ, ಸ್ವಾತಂತ್ರ್ಯ ಹೋರಾಟ ಸೇರಿದಂತೆ ದೇಶಕ್ಕೆ ನೀಡಿರುವ ಕೊಡುಗೆ ಸ್ಮರಿಸಲಾಯಿತು. ಜನಸಾಮಾನ್ಯರಲ್ಲಿ ಗಾಂಧಿ ತತ್ವಗಳ ಅರಿವು ಮೂಡಿಸುವ ಉದ್ದೇಶದೊಂದಿಗೆ ವಾರ್ತಾ ಇಲಾಖೆ ರಾಜ್ಯಾದ್ಯಂತ ಈ ಅಭಿಯಾನ ಹಮ್ಮಿಕೊಂಡಿದೆ. ಶಾಂತಿ ಮಾರ್ಗ, ಸತ್ಯ ಮಾರ್ಗ ರಥಗಳ ಪ್ರತ್ಯೇಕ ಅಭಿಯಾನದ ರಥಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅ. 2ರಿಂದ ಆರಂಭಗೊಂಡು ಅ. 28ರವರೆಗೆ ವಿಜಯಪುರ ಜಿಲ್ಲೆಯಲ್ಲಿ ಸಂಚರಿಸಲಿದೆ……