ಬೆಂಗಳೂರು:
ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ನಟಿಸ್ತಿರೋ ಗಾಳಿಪಟ-2 ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರದ ಕೆಲ ಫೋಟೋಗಳನ್ನ ಹಂಚಿಕೊಂಡಿರೋ ಟೀಂ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡೋದಾಗಿ ಹೇಳಿದೆ. ಹಿಂದಿನ ಗಾಳಿಪಟಕ್ಕೂ ಈ ಗಾಳಿಪಟಕ್ಕೂ ಸಂಬಂಧ ಇಲ್ಲದೇ ಇದ್ದರೂ, ಕಾಮನ್ ಇರುವಂಥ ಹಲವು ಅಂಶಗಳು ಇವೆಯಂತೆ. ಈ ಚಿತ್ರಕ್ಕೆ ಅದೇ ಹೆಸರನ್ನು ಇಡಲು ಕಾರಣವೂ ಇದೆಯಂತೆ. ಅದನ್ನು ಸಿನಿಮಾದಲ್ಲಿ ನೋಡಿ ಎಂದಿದ್ದಾರೆ ನಿರ್ದೇಶಕರು. ಗಾಳಿಪಟ-2 ಮೊದಲನೇ ಸಿನಿಮಾಗಿಂತಲೂ ದೊಡ್ಡ ಮಟ್ಟದ ಎಂಟರ್‌ಟೇನ್‌ಮೆಂಟ್ ಇರುವ ಸಿನಿಮಾವಾಗಲಿದೆ. ಅದರಲ್ಲಿ ಸಾಕಷ್ಟು ಅಚ್ಚರಿಗಳು ಇರಲಿವೆ ಎಂದು ಹೇಳಿದ್ದಾರೆ …..