Breaking News

ದೊಡ್ಡಣ್ಣನಿಗೆ ಇರಾಕ್ ಶಾಕ್​​ ..!

ಇರಾನ್​​ ಬದಲು ಇರಾಕ್​​​ನಿಂದ ರಾಕೆಟ್ ಅಟ್ಯಾಕ್....

SHARE......LIKE......COMMENT......

ನವ ದೆಹಲಿ:

ಡೊನಾಲ್ಡ್​ ಟ್ರಂಪ್​ ವಾರ್ನಿಂಗ್​ ನಡುವೆಯೂ ಮತ್ತೆ ದೊಡ್ಡಣ್ಣನ ಸೇನಾ ನೆಲೆ ಟಾರ್ಗೆಟ್ ಮಾಡಿ ರಾಕೆಟ್ ಅಟ್ಯಾಕ್​ ಆಗಿದೆ. ಈ ಬಾರಿ ಇರಾನ್​​ ಬದಲು ಇರಾಕ್​​​​ ದೊಡ್ಡಣ್ಣನಿಗೆ ಶಾಕ್​​ ಕೊಟ್ಟಿದೆ. ಕಳೆದ ರಾತ್ರಿ ಅಮೆರಿಕ ಸೇನಾ ನೆಲೆ ಮತ್ತು ವಿದೇಶಿ ರಾಯಭಾರಿಗಳಿರೋ ಹೈ ಸೆಕ್ಯೂರಿಟಿ ಸ್ಥಳವನ್ನು ಗುರಿಯಾಗಿಸಿ ರಾಕೆಟ್​ ದಾಳಿ ಮಾಡಲಾಗಿದೆ. ಇರಾಕ್​ ರಾಜಧಾನಿ ಬಾಗ್ದಾದ್​​ನ ಗ್ರೀನ್ ಝೋನ್​ ಮೇಲೆ ರಾಕೆಟ್​ ದಾಳಿ ನಡೆದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಮೆರಿಕ ನೆಲೆ ಮೇಲೆ ಇರಾನ್​​ ಕ್ಷಿಪಣಿ ದಾಳಿ ನಡೆದ 24 ಗಂಟೆಯಲ್ಲೇ ಇರಾಕ್​​​​​​​ ಕೂಡಾ ಪ್ರತೀಕಾರದ ಬಿಸಿ ಮುಟ್ಟಿಸಿದೆ.

ಇರಾನ್​​ ಸೇನಾಧಿಕಾರಿ ಸುಲೇಮಾನಿ, ಇರಾಕ್​​ ಕಮಾಂಡರ್​​​ ಅಬು ಮುಹಾದಿಸ್​​ ಹತ್ಯೆಗೆ ಪ್ರತೀಕಾರವಾಗಿ ಇನ್ನಷ್ಟು ಅಟ್ಯಾಕ್​​ ಮಾಡೋ ಮುನ್ಸೂಚನೆಯನ್ನು ಎರಡೂ ದೇಶಗಳು ನೀಡ್ತಿವೆ. ಹಷದ್ ಬಂಡುಕೋರರ​ ತಂಡದಿಂದ ರಾಕೆಟ್​ ದಾಳಿ ನಡೆದಿರೋ ಶಂಕೆ ಇದೆ. ಇರಾಕ್​​​ನಿಂದ ಅಮೆರಿಕದ ಸೇನೆಯ ಕೊನೆಯ ಯೋಧ ಹೊರಹೋಗುವ ತನಕವೂ ದಾಳಿ ಮುಂದುವರೆಯಲಿದೆ ಎಂದು ಇರಾಕ್​ ಅರೆಸೇನಾ ಪಡೆ ಮುಖ್ಯಸ್ಥ ಕ್ವಾಸಿ ಅಲ್​ ಖಾಜಿಲ್​​ ವಾರ್ನಿಂಗ್ ನೀಡಿದ್ದಾರೆ. ನಿಮ್ಮ ಕಣ್ಣು ಮುಚ್ಚಬೇಡಿ..ನೀವು ಇಲ್ಲಿಂದ ಹೋಗೋವರೆಗೂ ಅಟ್ಯಾಕ್ ನಿಲ್ಲಲ್ಲ ಎಂದಿದ್ದಾನೆ……