Breaking News

18-JAN-2019 ನಿತ್ಯಭವಿಷ್ಯ..

ದಿನ ಪಂಚಾಂಗ....

SHARE......LIKE......COMMENT......

                  ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?

ದಿನ ಪಂಚಾಂಗ..
ಶುಕ್ಲ ಪಕ್ಷ ದ್ವಾದಶಿ, ಶುಕ್ರವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 01:55 ರಿಂದ 03:596ರ ವರೆಗೆ
ಯಮಗಂಡಕಾಲ: ಬೆಳಿಗ್ಗೆ 6:49 ರಿಂದ 08:14ರ ವರೆಗೆ
ಗುಳಿಕಕಾಲ: ಬೆಳಿಗ್ಗೆ 09.39 ರಿಂದ 11:1604ರ ವರೆಗೆ
ಮೇಷ
ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಿ ಗೌರವ ಸಂಪಾದಿಸುವಿರಿ. ಆರ್ಥಿಕ ಲಾಭವಾಗಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಿಕೊಳ್ಳಬೇಕಾದೀತು. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಶುಭಸಂಖ್ಯೆ: 7
ವೃಷಭ
ಯಾವುದೇ ಕೆಲಸ ಮಾಡುವುದಿದ್ದರೂ ಕುಟುಂಬದ ಹಿರಿಯರೊಡನೆ ಸಮಾಲೋಚನೆ ನಡೆಸಿ. ದಾಯಾದಿಗಳಿಂದ ತೊಂದರೆ ಉಂಟಾಗುವ ಸಂಭವವಿದೆ. ಆರ್ಥಿಕ ಲಾಭಗಳಿದ್ದರೂ ಅಷ್ಟೇ ಖರ್ಚು ವೆಚ್ಚಗಳಿರಲಿವೆ.

ಶುಭಸಂಖ್ಯೆ: 1
ಮಿಥುನ

ಮಿತ್ರರ ಅನಾರೋಗ್ಯ ಸುದ್ದಿ ಕೇಳಿಬಂದೀತು. ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ಯೋಚಿಸಿ ಹೆಜ್ಜೆಯಿಡಿ. ಕುಟುಂಬದವರೊಂದಿಗೆ ಕಿರಿ ಕಿರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಶುಭಸಂಖ್ಯೆ: 3

ಕಟಕ
ಭೋಜನ ಪ್ರಿಯರಾಗಿದ್ದರೆ ಇಂದು ಉತ್ತಮ ಭೋಜನ ಸವಿಯುವಿರಿ. ಬಂಧು ಮಿತ್ರರ ಆಗಮನದಿಂದ ಸಂತೋಷ ಕಾಣುವಿರಿ. ಖರ್ಚು ವೆಚ್ಚಗಳೂ ಅಧಿಕವಾಗಲಿದೆ.

ಶುಭಸಂಖ್ಯೆ: 9
ಸಿಂಹ

ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಹೊಸ ಜನರೊಂದಿಗಿನ ಓಡಾಟ ಇಂದು ನಿಮ್ಮನ್ನು ಉಲ್ಲಾಸದಾಯಕವಾಗಿಡುತ್ತದೆ.
ಶುಭಸಂಖ್ಯೆ: 4

ಕನ್ಯಾ
ಸ್ನೇಹಿತರಿಂದ ವಂಚನೆಗೊಳಗಾಗುವ ಸಂಭವವಿದೆ. ಹಣಕಾಸಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಿಗೂ ಸಾಲ ಕೊಡಲು ಹೋಗಬೇಡಿ. ನೆಮ್ಮದಿಗಾಗಿ ಇಷ್ಟದೇವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ.

ಶುಭಸಂಖ್ಯೆ: 8
ತುಲಾ
ಯಾವುದೇ ಹೆಜ್ಜೆಯಿಡಬೇಕಾದರೂ ಏಕಾಂಗಿ ನಿರ್ಧಾರ ಕೈಗೊಂಡರೆ ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೀತು. ಸಂಗಾತಿಯೊಡನೆ ಕಿರಿಕ್ ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.

ಶುಭಸಂಖ್ಯೆ: 6
ವೃಶ್ಚಿಕ
ಬೇರೆ ಬೇರೆ ಮೂಲಗಳಿಂದ ಧನಾಗಮನವಾಗಿ ಸಂತಸ ಕಾಣುವಿರಿ. ಬರಬೇಕಿದ್ದ ಬಾಕಿ ಹಣ ಸಂದಾಯವಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಿ ಬರಬಹುದು. ಸಂಗಾತಿಯೊಂದಿಗೆ ಉಪಯುಕ್ತ ಸಮಯ ಕಳೆಯುವಿರಿ.

ಶುಭಸಂಖ್ಯೆ: 9
ಧನಸ್ಸು

ಕುಟುಂಬದವರೊಂದಿಗೆ ಪ್ರವಾಸ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರ. ಆದಷ್ಟೂ ವಾಹನ ಚಾಲನೆ ಮಾಡದೇ ಇದ್ದರೆ ಒಳ್ಳೆಯದು. ಆರ್ಥಿಕ ಲಾಭವಾಗಿ ನೆಮ್ಮದಿ ಕಾಣುವಿರಿ.
ಶುಭಸಂಖ್ಯೆ: 4

ಮಕರ
ಪ್ರೇಮಿಗಳಿಗೆ ಶುಭ ದಿನ.ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಹೊಸ ಮನೆ ಖರೀದಿ ಬಗ್ಗೆ ಯೋಚನೆ ಮಾಡುವಿರಿ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರವಿರಲಿ.

ಶುಭಸಂಖ್ಯೆ: 5
ಕುಂಭ
ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆಯಾದೀತು. ಕುಲದೇವರಿಗೆ ಪ್ರಾರ್ಥನೆ ಮಾಡಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಖರ್ಚು ವೆಚ್ಚಗಳು ಅಧಿಕವಾದೀತು. ಆದರೆ ಕುಟುಂಬದವರೊಂದಿಗೆ ನೆಮ್ಮದಿಯ ವಾತಾವರಣ ಅನುಭವಿಸುವಿರಿ.

ಶುಭಸಂಖ್ಯೆ: 7
ಮೀನ

ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಇಂದು ಅತೀವ ಪ್ರಯತ್ನ ನಡೆಸಬೇಕಾದೀತು. ಹೊಸ ಜನರೊಂದಿಗೆ ವಿಶ್ವಾಸ ಬೆಳೆಸುವ ಮೊದಲು ಯೋಚಿಸಿ ಹೆಜ್ಜೆಯಿಡಿ.
ಶುಭಸಂಖ್ಯೆ: 2