ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ ಗುರುವಾರ ಸಂಕಷ್ಟಹರ ಚತುರ್ಥಿ,ಹುಬ್ಬ ನಕ್ಷತ್ರ |
ರಾಹುಕಾಲ :- ಮಧ್ಯಾಹ್ನ 02:02 ರಿಂದ 03:28 ವರಿಗೆ |
ಯಮಗಂಡ ಕಾಲ:- ಬೆಳಿಗ್ಗೆ 06:49 ರಿಂದ to 08:16 ವರಿಗೆ |
ಗುಳಿಕಕಾಲ: ಬೆಳಿಗ್ಗೆ 09:40 ರಿಂದ 11:06 ರ ವರೆಗೆ |
ಮೇಷ ರಾಜಕಾರಣಿಗಳಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ,ಮನೆಯ ಶುಭ ಕಾರ್ಯಗಳಿಗೆ ಹೆಚ್ಚು ಖರ್ಚುಗಳು , ಮಕ್ಕಳ ಆರೋಗ್ಯದಲ್ಲಿ ಸುಧಾರಣೆ, |
|
ವೃಷಭ ಅನಿರೀಕ್ಷಿತವಾಗಿ ಅಧಿಕಾರ ಹಾಗೂ ಉನ್ನತ ಹುದ್ದೆಗಳು ನಿಮ್ಮನ್ನು ಹುಡುಕಿ ಬರುವವು. ವ್ಯಾಪಾರ, ವ್ಯವಹಾರಗಳಿಗೆ ಸಾಲದ ಮರೆ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. |
|
ಮಿಥುನ
ಮನೆಯ ಶುಭ ಕಾರ್ಯಗಳ ಖರ್ಚುಗಳು ಹೆಚ್ಚಾಗಲಿದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ರಿಯಲ್ ಎಸ್ಟೇಟ್ ವ್ಯವಹಾರ ಲಾಭದಾಯಕವಾಗಲಿದೆ. |
|
ಕಟಕ ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಅವಸರದಿಂದ ಯಾವುದೇ ಕಾರ್ಯಗಳನ್ನು ಮಾಡಬೇಡಿ.
|
|
ಸಿಂಹ
ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಾನಸಿಕ ಒತ್ತಡದಿಂದ ದೂರವಾಗುವಿರಿ. ಹಣ ಅಥವಾ ಆಸ್ತಿ ನಿಮ್ಮ ಕೈ ಸೇರುತ್ತದೆ.ಕೆಲಸ ಕಾರ್ಯಗಳಲ್ಲಿ ಮಂದಪ್ರಗತಿ ಉಂಟಾಗುವುದು. ಅವಸರದಿಂದ ಯಾವುದೇ ಕಾರ್ಯಗಳನ್ನು ಮಾಡಬೇಡಿ. |
|
ಕನ್ಯಾ ನೀವು ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ಮುಂದೆ ಅನುಕೂಲವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಿಲ್ಲ. ನೀವೆಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದಾಗುವುದು |
|
ತುಲಾ ಕೈಗೊಂಡ ನಿರ್ಧಾರಗಳು ಅಂತಿಮಘಟ್ಟ ತಲುಪಲಿವೆ. ಸರ್ಕಾರಿ ನೌಕರರಿಗೆ ಕೊಂಚ ವಿಶ್ರಾಂತಿ ದೊರೆಯಲಿದೆ.
|
|
ವೃಶ್ಚಿಕ ಕ್ರೀಡಾಪಟುಗಳು ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವರು. ಗೃಹ ಅಥವಾ ನಿವೇಶನ ಖರೀದಿಗೆ ಮನಸ್ಸು ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಲಾಭ. |
|
ಧನಸ್ಸು
ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು, ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುವುದು
|
|
ಮಕರ ಜೀವನದಲ್ಲಿ ಅನಿರೀಕ್ಷಿತ ತಿರುವು ಬರಲಿದ್ದು, ಉತ್ತುಂಗಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. |
|
ಕುಂಭ ನೀವು ಅಂದುಕೊಂಡ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುವವು. ಕಟ್ಟಡ ಕಾಮಗಾರಿ ಕೆಲಸಗಾರರಿಗೆ, ಎಂಜಿನಿಯರ್‌ಗಳಿಗೆ ಉತ್ತಮ. ಸಾಲ ಮರುಪಾವತಿ ಆಗುವುದು |
|
ಮೀನ
ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ಕಾಣುವಿರಿ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವರೆಗೆ ಟೀಕೆಗಳು. |