ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ: |
ತ್ರಯೋದಶಿ ತಿಥಿ ಬುಧವಾರ ಉತ್ತರ ನಕ್ಷತ್ರ |
ರಾಹುಕಾಲ:- ಮಧ್ಯಾಹ್ನ 12:22 to 01:56 ವರಿಗೆ |
ಯಮಕಂಟಕ ಕಾಲ:-: ಬೆಳಗ್ಗೆ 07:43 to 09:16ವರಿಗೆ |
ಮೇಷ ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. |
|
ವೃಷಭ ಈ ದಿನ ಸಂತೋಷದ ಕ್ಷ ಣಗಳನ್ನು ಕಳೆಯುವಿರಿ. ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸವನ್ನು ತಂದು ಕೊಡುವವು. ಹಣದ ವಿಚಾರದಲ್ಲಿ ಜಾಗ್ರತರಾಗಿರಿ. |
|
ಮಿಥುನ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಕೌಟುಂಬಿಕವಾಗಿಯೂ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ |
|
ಕಟಕ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.ನಿಮ್ಮ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಅನುಕೂಲ,ಮನೆಯಲ್ಲಿ ಮಡದಿ ಮಕ್ಕಳ ಮೇಲೆ ಪ್ರೀತಿ ವಿಶ್ವಾಸ ತೋರಿ.
|
|
ಸಿಂಹ
ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಒತ್ತಡ ಉಂಟು ಮಾಡುವುದು. ಸ್ನೇಹಿತರ ಬೆಂಬಲ ನಿಮಗಿರುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು |
|
ಕನ್ಯಾ ಈ ದಿನದ ಯಾವುದೇ ಕೆಲಸ ಕಾರ್ಯಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು. ಸೋದರರೊಂದಿಗಿನ ಬಾಂಧವ್ಯ ಮರು ಹೊಂದಾಣಿಕೆ ಆಗುವ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಿರುವುದು |
|
ತುಲಾ ನೂತನ ಯೋಜನೆಗಳಿಂದ ಬದುಕಿಗೆ ಹೊಸ ಆಯಾಮ ದೊರೆಯಲಿದೆ. ಕಾರ್ಯಗಳಲ್ಲಿ ಗೆಲುವು ಕಾಣುವುದು. ಆರ್ಥಿಕ ಸ್ಥಿತಿ ಉತ್ತಮವಿರುವುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ |
|
ವೃಶ್ಚಿಕ ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಮನೋರಂಜನೆಗಾಗಿ ಯೋಚಿಸುವ ಸಮಯವಿದು. ಹೂಡಿಕೆ ವಿಷಯದಲ್ಲಿ ಲಾಭವಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುವುದು. |
|
ಧನಸ್ಸು
ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುವುದು. ಹೆಚ್ಚು ಪೂಜೆ ಪುನಸ್ಕಾರಗಳಲ್ಲಿ ಸಮಯ ಕಳೆಯುವುದು ,ಆರ್ಥಿಕ ಸ್ಥಿತಿ ಉತ್ತಮವಿರುವುದು |
|
ಮಕರ ಮದುವೆ ಅಥವಾ ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಸ್ನೇಹಿತರು ಸಕಾಲದಲ್ಲಿ ಹಣಕಾಸಿನ ವಿಷಯವಾಗಿ ಸಹಾಯ ಮಾಡುವರು. ಆರೋಗ್ಯ ಉತ್ತಮವಿರುವುದು |
|
ಕುಂಭ ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಸಾಮಾಜಿಕ ಮತ್ತು ರಾಜಕೀಯವಾಗಿ ಹೆಸರು ಗಳಿಸುವಿರಿ. ಕೌಟುಂಬಿಕ ಜೀವನ ಉತ್ತಮವಿರುವುದು. |
|
ಮೀನ
ಮಾಡುವ ಕೆಲಸ ಕಾರ್ಯಗಳಲ್ಲಿ ತಾಳ್ಮೆಯಿಂದಿರಿ. ವೃತ್ತಿ ರಂಗದಲ್ಲಿ ಯಶಸ್ಸನ್ನು ಹೊಂದುವಿರಿ. ಆರೋಗ್ಯದ ಕಡೆ ಗಮನವಿರಲಿ. ಪ್ರಯಾಣದಲ್ಲಿ ಎಚ್ಚರವಿರಲಿ |