ಯಾವ ರಾಶಿಗೆ ಒಳಿತು..? ಯಾವ ರಾಶಿಗೆ ಕೆಡುಕು.. ?
ಪಂಚಾಂಗ |
---|
ನವಮೀ ತಿಥಿ ಗುರುವಾರ ಶ್ರವಣ ನಕ್ಷತ್ರ |
ರಾಹುಕಾಲ :- ಮಧ್ಯಾಹ್ನ 01:32 ರಿಂದ 03:30 ವರಿಗೆ |
ಯಮಕಂಟಕ ಕಾಲ:- ಬೆಳಿಗ್ಗೆ 06:13 ರಿಂದ 07:41 ವರಿಗೆ |
ಗುಳಿಕಕಾಲ:- ಬೆಳಿಗ್ಗೆ 06:13 ರಿಂದ 07:41 ವರಿಗೆ |
ಮೇಷ ಆರೋಗ್ಯ ಸಮಸ್ಯೆ ಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ. ಅತೀ ಜವಾಬ್ದಾರಿಗಳು ಮಹಿಳೆಯರಿಗೆ ಕಾರ್ಯಒತ್ತಡ ತಂದಾವು. ದುಡುಕದೇ ಮುಂದುವರಿಯಿರಿ |
|
ವೃಷಭ ವೃತ್ತಿರಂಗದಲ್ಲಿ ಉತ್ಸಾಹ ತಂದಾರು. ಆರ್ಥಿಕವಾಗಿ ಕಾರ್ಯಸಾಧನೆಗೆ ಪೂರಕವಾಗಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನಮಾನಗಳು ಪ್ರಾಪ್ತಿಯಾದಾವು. ದಿನಾಂತ್ಯ ಶುಭವಾರ್ತೆ ಇದೆ |
|
ಮಿಥುನ ಆರ್ಥಿಕವಾಗಿ ಜಾಗ್ರತೆ ವಹಿಸಬೇಕಾದೀತು. ಅನಾವಶ್ಯಕವಾಗಿ ಋಣಾತ್ಮಕವಾಗಿ ಚಿಂತೆ ಕಾಡಲಿದೆ. ಸಾಂಸಾರಿಕವಾಗಿ ವೈಯಕ್ತಿಕವಾಗಿ ಕಲಹದಿಂದ ದೂರವಿರಿ. ವಾಹನ ಸಂಚಾರದಲ್ಲಿ ಜಾಗ್ರತೆ |
|
ಕಟಕ ವರ್ಗದವರ ಸಹಕಾರ .ತಂದೀತು ಶುಭಮಂಗಲ ಕಾರ್ಯವಾಗಿ ಧನವ್ಯಯ. ಶತ್ರುಗಳ ಹಿನ್ನಡೆ ತುಸು ಸಮಾಧಾನ ತರಲಿದೆ. ನವದಂಪತಿಗಳಿಗೆ ಶುಭ. |
|
ಸಿಂಹ ಸಾಮಾಜಿಕವಾಗಿ ಪ್ರತಿಷ್ಠಿತರ ಸ್ನೇಹ ಪೂರಕವಾಗುತ್ತದೆ,ದೇಹಾರೋಗ್ಯದಲ್ಲಿ ಉದಾಸೀನತೆ, ಗೃಹ ಬದಲಿ, ಗೃಹ ನಿರ್ಮಾಣದಂತಹ ಕೆಲಸಗಳಿಗೆ ಮನಸ್ಸಾದೀತು. ವಿದ್ಯಾರ್ಥಿಗಳಿಗೆ ಶುಭ.. |
|
ಕನ್ಯಾ ವೃತ್ತಿರಂಗದಲ್ಲಿ ಕಾರ್ಯಸಾಧನೆಗೆ ಬೆಲೆ ಸಿಗಲಿದೆ ,ಯೋಗ್ಯ ವಯಸ್ಕರು ಕಂಕಣ ಬಲವನ್ನು ಹೊಂದಲಿದ್ದಾರೆ,ಉಳಿತಾಯವೆಲ್ಲ ವ್ಯಯದಲ್ಲಿ ಕರಗೀತು. ವಾಹನ ಚಾಲನೆಯಲ್ಲಿ ಜಾಗ್ರತೆ. |
|
ತುಲಾ ಸಾಂಸಾರಿಕವಾಗಿ ಸಮಾಧಾನ ಸಿಗದು,ಆರೋಗ್ಯದ ಬಗ್ಗೆ ನಿಗಾ ವಹಿಸಿರಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನ ನಿರುದ್ಯೋಗಿಗಳು ಉದ್ಯೋಗ ಲಾಭ. |
|
ವೃಶ್ಚಿಕ ಕಲಹದಿಂದ ದೂರವಿರಿ. ಆರೋಗ್ಯದ ಬಗ್ಗೆ ಕಾಳಜಿ,ಯೋಗ್ಯ ವಯಸ್ಕರಿಗೆ ಕಂಕಣಬಲ ಬರುತ್ತದೆ,ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಾಡುತ್ತದೆ. |
|
ಧನಸ್ಸು
ಹಂತವಾಗಿ ತೋರಿಬರುವ ಅಭಿವೃದ್ಧಿ ಸಂತಸ,ಕ್ರೀಡಾಗಾರರಿಗೆ ಉತ್ತಮ,ಪಾಲು ಬಂಡವಾಳಕ್ಕೆ ಸಾಧ್ಯತೆ ತೋರಿಬಂದರೂ ಹೆಚ್ಚಿನ ಜಾಗ್ರತೆ ವಹಿಸಬೇಕು. |
|
ಮಕರ ಆತುರತೆ ತೋರದೆ ಮುಂದುವರಿಯಿರಿ,ಯಶೋವೃದ್ಧಿ ಗೋಚರ, ಅವಿವಾಹಿತರ ಕಂಕಣಬಲಕ್ಕೆ ನಾಂದಿ ಹಾಡಲಿವೆ,ದೇವತಾ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಿಗಲಿದೆ. |
|
ಕುಂಭ ಸಹೋದ್ಯೋಗಿಗಳಿಂದ ಕೆಲಸದಲ್ಲಿ ಬೆಂಬಲ,ಕೌಟುಂಬಿಕ ಸಮಸ್ಯೆಗೆ ಮಿತಿಮೀರಿದ ಖರ್ಚು |
|
ಮೀನ ಸಹೋದರರೊಳಗೆ ವಿರಸ,ಸ್ವತಂತ್ರವಾಗಿ ಹೊಸ ಚಿಂತನೆಗಳು ಕಾರ್ಯರೂಪ, ಆಗಾಗ ದೇವತಾ ದರ್ಶನ ಭಾಗ್ಯವಿದೆ, ಧನವಿನಿಯೋಗದ ಬಗ್ಗೆ ಜಾಗ್ರತೆ. |