Breaking News

ದೇಹಕ್ಕೆ 8 ಗಂಟೆಗಳ ನಿದ್ರೆ ಎಷ್ಟು ಅಗತ್ಯ ಗೊತ್ತೆ..?

SHARE......LIKE......COMMENT......

ಹೆಲ್ತ್ ಕೇರ್:
ಒಂದು ಹೊಸ ಸಂಶೋಧನಾ ವರದಿ ಪ್ರಕಾರ ದಿನಕ್ಕೆ  7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವ ಜನರು ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ನಿದ್ರಿಸುವವರಿಗಿಂತ ಹೆಚಿನ ಅರಿವು ಉಳ್ಳವರಾಗಿರುತ್ತಾರೆ. ಈ ಅಧ್ಯಯನಕ್ಕಾಗಿ ವಿಶ್ವದಾದ್ಯಂತದ 40,000 ಕ್ಕಿಂತ ಹೆಚ್ಚು ಜನರು ಆನ್ ಲೈನ್ ವೈಜ್ಞಾನಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಅವರುಗಳಿಗೆ ತಿಳಿವಿನ ಹೆಚ್ಚಳ ಕುರಿತು ಅನೇಕ ಪ್ರಶ್ನಾವಳಿ ನೀಡಲಾಗಿತ್ತು.

ಅಧ್ಯಯನಕ್ಕೆ ಒಳಗಾದ ಬಹುಪಾಲು ಜನರು ತಾವು ದಿನಕ್ಕೆ 6.3 ತಾಸು ನಿದ್ರಿಸುವುದಾಗಿ ಹೇಳಿದ್ದಾರೆ. ಎಂದರೆ ಆರೋಗ್ಯಕರ ನಿದ್ರೆ ಎಂದು ಗುರುತಿಸಿದ ಅವಧಿಗೆ ಒಂದು ತಾಸು ಕಡಿಮೆ ನಿದ್ರೆಯನ್ನು ಮಾಡುತ್ತಾರೆ. ನಾಲ್ಕು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಸಮಯ ಮಲಗಿದ್ದವರಲ್ಲಿ ಹೆಚ್ಚಿನವರು ಒಂಭತ್ತು ವರ್ಷ ವಯಸ್ಸಿನವರಾಗಿದ್ದಾರೆ ಎನ್ನುವುದು ವಿಸ್ಮಯಕಾರಿ ಸಂಗತಿಯಾಗಿದೆ.

ಹೆಚ್ಚು ಕ್ರಿಯಾತ್ಮಕ ಅರಿವಿನ ನಡವಳಿಕೆಯೊಂದಿಗೆ ಸಂಬಂಧಿಸಿದ ನಿದ್ರೆಯ ಪ್ರಮಾಣವು ಎಲ್ಲಾ ವಯೋಮಾನದವರಿಗೆ ಒಂದ್ ಆಗಿದ್ದು ಇದಾಗಲೇ ಹೇಳಿದಂತೆ 7 ರಿಂದ 8 ಗಂಟೆಗಳ ಅವಧಿಯ ನಿದ್ರೆ ಅದಾಗಿದೆ. ಇದಕ್ಕೆ ಹೆಚ್ಚು ಕಾಲ ಮಲಗಿದ ಜನರು ಕಡಿಮೆ ನಿದ್ರಿಸುವವರಿಗಿಂತ ದುರ್ಬಲರಾಗಿರುತ್ತಾರೆ.

ನಿದ್ರಾ ಅಭಾವದ ಹೆಚ್ಚಿನ ವೈಜ್ಞಾನಿಕ ಸಂಶೋಧನೆಗಿಂತಲೂ ಇದು ವಿಭಿನ್ನ ಅಧ್ಯಯನವಾಗಿದೆ.ದೀರ್ಘಕಾಲದವರೆಗೆ ಸಾಕಷ್ಟು ನಿದ್ದೆ ಪಡೆಯದಿರುವುದು ನಿಮ್ಮ ಮೆದುಳಿನ ಮೇಲೆ  ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಸಾಬೀತು ಮಾಡೀದೆ. ಧನಾತ್ಮಕವಾಗಿ ಹೇಳಬೇಕಾದರೆ ಒಂದು ರಾತ್ರಿಯ ನಿದ್ರೆ ಕೂಡ ವ್ಯಕ್ತಿಯು ಯೋಚಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ನಿಮ್ಮ ಮೆದುಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ದಿನನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆಯ ಅಗತ್ಯವಿದೆ……