ಹೆಲ್ತ್ ಟಿಪ್ಸ್:
ಮಕ್ಕಳು ನಿದ್ರೆಯ ಸಮಸ್ಯೆಯಿಂದ ಬಳಲುತ್ತಾರೆ. ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಇಲ್ಲದ ಕಾರಣ ದಿನವೆಲ್ಲ ಡಲ್ ಆಗಿರುತ್ತಾರೆ. ಇದಕ್ಕೆ ಪರಿಹಾರ ಏನೆಂದರೆ ಮಕ್ಕಳಿಗೆ ಸರಿಯಾದ ರೀತಿಯ ಆಹಾರ ನೀಡುವುದು. ರಾತ್ರಿ ಊಟವಾದ ಬಳಿಕ ಮಕ್ಕಳಿಗೆ ನೀವು ನೀಡುವಂತಹ ಕೆಲವು ಆಹಾರಗಳು ಅವರು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಆ ಆಹಾರಗಳು ಯಾವುವು ಎಂದು ತಿಳಿಯಿರಿ..
*ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟಾಶಿಯಂ, ಮೆಗ್ನೇಶಿಯಮ್, ವಿಟಾಮಿನ್ ಬಿ6 ಮತ್ತು ನ್ಯಾಚುರಲ್ ಕಾಂಪ್ಲೆಕ್ಸ್ ಕಾರ್ಬೋಹೈಡ್ರೈಟ್ ಹೆಚ್ಚಾಗಿರುತ್ತದೆ. ಈ ಹಣ್ಣನ್ನು ನೇರವಾಘಿ ಸೇವಿಸಲು ನೀಡಿ ಅಥವಾ ಮಿಲ್ಕ್ಶೇಕ್ ಜೊತೆ ಮಕ್ಕಳಿಗೆ ಸಂಜೆ ನೀಡಿದರೆ ಉತ್ತಮ.
ಓಟ್ಸ್ : ನಿಮ್ಮ ಹೃದಯವನ್ನು ಆರೋಗ್ಯಯುತವಾಗಿಡಲು ಮಾತ್ರ ಓಟ್ಸ್ ಸಹಾಯ ಮಾಡುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಇದನ್ನು ಮಕ್ಕಳು ಸೇವನೆ ಮಾಡಿದರೆ ನರಮಂಡಲದ ವ್ಯವಸ್ಥೆ ಸಕ್ರಿಯವಾಗುತ್ತದೆ ಹಾಗೂ ಆರೋಗ್ಯಕರವಾಗುತ್ತದೆ. ಇದರಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆ ಮೂಲಕ ನಿದ್ರೆ ಚೆನ್ನಾಗಿ ಬರುತ್ತದೆ.
*ಅನಾನಸ್ : ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಅನಾನಸ್ ಸೇವನೆ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಇದನ್ನು ಊಟಕ್ಕೆ ಮೊದಲು ಅಂದರೆ ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ನೀಡಿದರೆ ಉತ್ತಮ.
*ಹಾಲು : ನೆಮ್ಮದಿಯಾಗಿ ನಿದ್ರೆ ಮಾಡಲು ಬಿಸಿಯಾದ ಹಾಲು ಸಹಕಾರಿಯಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಬ್ರೈನ್‌ನಲ್ಲಿ ಟ್ರಿಪ್ಟೋಫನ್ ಅಂಶವನ್ನು ಉತ್ಪಾದನೆ ಮಾಡಲು ಸಹಾಯಕವಾಗಿದೆ. ಇದರಿಂದ ಮಕ್ಕಳಿಗೆ ಬೇಗನೆ ನಿದ್ರೆ ಬರುತ್ತದೆ.
*ವಾಲ್‌ನಟ್ : ಮಕ್ಕಳಿಗೆ ನಿದ್ರೆ ಮಾಡುವ ಮೊದಲು ಒಂದು ಹಿಡಿ ವಾಲ್‌ನಟ್ ನೀಡಿ. ಇದನ್ನು ಫ್ರುಟ್ಸ್ ಸಲಾಡ್ ಮಾಡಿ ಅಥವಾ ಡೆಸರ್ಟ್ ರೂಪದಲ್ಲೂ ಸಹ ಬಳಕೆ ಮಾಡಬಹುದು…….