Breaking News

ಪುರಾತತ್ವ ಇಲಾಖೆಯ ಬೇಜವಾಬ್ದಾರಿ..!

ಶಿಥಿಲದ ಅಂಚಿಗೆ 12ನೇ ಶತಮಾನದ ದೇವಾಲಯ....

SHARE......LIKE......COMMENT......

ಹಾವೇರಿ:
ಹಲವು ಐತಿಹಾಸಿಕ ತಾಣಗಳಿರುವ ಜಿಲ್ಲೆ ಹಾವೇರಿಯಾಗಿದ್ದು, ಆರಂಭದ ರಾಜಮನೆತನ ಕದಂಬರಿಂದ ಹಿಡಿದು ಇತ್ತಿಚೀನ ನವಾಬರು ಆಡಳಿತ ನಡೆಸಿದ್ದಾರೆ. ಅವರ ಆಡಳಿತದ ಕುರುಹುಗಳನ್ನು ಸಾರುವ ಹಲವು ಪುರಾತನ ದೇವಸ್ಥಾನಗಳು ಕಂಡು ಬಂದಿವೆ

ರಾಜಮನೆತನಗಳಲ್ಲಿ ಕಲ್ಯಾಣಿ ಚಾಲುಕ್ಯರು ಜಿಲ್ಲೆಯಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನ ನಿರ್ಮಿಸಿದ್ದು, ಅವುಗಳಲ್ಲಿ ಅತೀ ವಿಶಿಷ್ಟವಾದದು ಹರಳಹಳ್ಳಿಯ ಸೋಮೇಶ್ವರ ದೇವಸ್ಥಾನ. ಹನ್ನೆರಡನೇ ಶತಮಾನ ದಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ಇಂದಿಗೂ ತನ್ನ ಸೊಬಗು ಉಳಿಸಿಕೊಂಡಿದೆ. ತುಂಗಭದ್ರಾ ನದಿಯ ತಟದಲ್ಲಿರುವ ತ್ರಿಕೂಟಾಚಾಲ ದೇವಾಲಯ ಇದಾಗಿದೆ. ಮೂರು ಗರ್ಭ ಗೃಹಗಳು, ಮೂರು ಅಂತರಾಳ ಮತ್ತು ಒಂದು ನವರಂಗವಿರುವ ದೇವಾಲಯ ಇದಾಗಿದ್ದು, ದೇವಸ್ಥಾನದ ಗೋಡೆಗಳ ಮೇಲೆ ಸುಂದರವಾದ ಶಿಲ್ಪಕಲೆ ಇವೆ. ಗಣಪತಿ, ಮಹಿಷಾಸುರ ಮರ್ದಿನಿ ಮತ್ತು ಚಾಮಧಾರಿಯರಿಂದ ಕೂಡಿದ ಮಕರ ತೋರಣಗಳನ್ನು ಹೊಂದಿದೆ.

ಇತಿಹಾಸ ಸಾರುವ ಈ ದೇವಾಲಯ ಈವರೆಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಸಾಕಷ್ಟು ಬಾರಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ರೂ ಸಹ ಈ ಸುಂದರ ದೇವಸ್ಥಾನ ಇದ್ದೂ ಇಲ್ಲದಂತಾಗಿದೆ ಪುರಾತತ್ವ ಇಲಾಖೆ ಆರಂಭದಲ್ಲಿ ತೋರಿಸಿದ ಆಸಕ್ತಿ ಈಗ ಉಳಿಸಿಕೊಂಡಿಲ್ಲ. ಪರಿಣಾಮ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಮನೆ ಕಟ್ಟಿಕೊಂಡಿದ್ದಾರೆ. ವಿಚಿತ್ರ ಅಂದರೆ ಜಿಲ್ಲಾ ಕೇಂದ್ರ ಹಾವೇರಿಯಿಂದ ಈ ಗ್ರಾಮಕ್ಕೆ ಸರಿಯಾದ ಬಸ್ ಸೌಕರ್ಯವಿಲ್ಲ. ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಹರಳಹಳ್ಳಿ ಉತ್ತಮ ಪ್ರವಾಸಿ ತಾಣವಾಗುವಲ್ಲಿ ಎರಡು ಮಾತಿಲ್ಲ….