ಬೆಂಗಳೂರು:
ಆಪರೇಷನ್ ಕಮಲ ಮೂಲಕ ರಾಜ್ಯದಲ್ಲಿ ಅಧಿಕಾರ ಸಾಧಿಸಿರೋ ಬಿಜೆಪಿ ಬಿಬಿಎಂಪಿ ಮೇಯರ್ ಗದ್ದುಗೆಗೆ ಕಣ್ಣಿಟ್ಟಿದೆ. ಸೆ.27 ರಂದು ನಡೆಯಲಿರುವ ಮೇಯರ್ ಚುನಾವಣೆ ಗೆಲ್ಲಲೇ ಬೇಕೆಂದು ಪಣತೊಟ್ಟಿರೋ ಬಿಜೆಪಿ ಬಿಬಿಎಂಪಿಯಲ್ಲೂ ರೆಸಾರ್ಟ್ ರಾಜಕಾರಣವನ್ನು ಶುರುಮಾಡಿದೆ ಎನ್ನಲಾಗ್ತಿದೆ. ಈಗಾಗಲೇ ಬಿಜೆಪಿ ನಾಯಕರು ಹಲವು ಸದಸ್ಯರನ್ನ ಗೋವಾಗೆ ಕರೆದೊಯ್ದಿದ್ದಾರೆ. ಪಕ್ಷೇತರ ಸದಸ್ಯರಾದ ಲಕ್ಷ್ಮೀ ನಾರಾಯಣ, ಆನಂದ್, ರಮೇಶ್, ಗಾಯತ್ರಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಗಾಳ ಹಾಕಿದ್ದಾರೆ. ಇನ್ನು ನಾಲ್ವರು ಪಕ್ಷೇತರ ಸದಸ್ಯರ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದು, ಶತಾಯ-ಗತಾಯ ಪಾಲಿಕೆ ಗದ್ದುಗೆ ಏರಲು ಬಿಜೆಪಿ ಪ್ರಯತ್ನಿಸುತ್ತಿದೆ……