Breaking News

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೇವೆ ಆರಂಭ..!

ಆದರೆ ಸಾರ್ವಜನಿಕರು ಬಸ್ ಹತ್ತುವಂತಿಲ್ಲ....

SHARE......LIKE......COMMENT......

ಬೆಂಗಳೂರು :

ಇಂದಿನಿಂದ ಬೆಂಗಳೂರಿನಲ್ಲಿ ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ಸೇವೆ ಆರಂಭಿಸಲಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಇಡೀ ಭಾರತವನ್ನು ಲಾಕ್ ಔಟ್ ಮಾಡಲಾಗಿತ್ತು. 21 ದಿನಗಳ ಕಾಲ ಯಾವುದೇ ಅಂಗಡಿ-ಮುಂಗಟ್ಟು ಬಂದ್ ಮಾಡಲಾಗಿದ್ದು, ಬಸ್, ರೈಲು, ವಿಮಾನ ಸಂಚಾರ ರದ್ದುಮಾಡಲಾಗಿತ್ತು. ಆದರೆ ಇಂದಿನಿಂದ ಬಿಎಂಟಿಸಿ 180 ಬಸ್ ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಅಗತ್ಯ ಸೇವೆಯಡಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ ಈ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಬಸ್ ಓಡಾಡುತ್ತಿದ್ದರೂ ಸಾರ್ವಜನಿಕರು ಬಸ್ ಹತ್ತುವಂತಿಲ್ಲ ಎಂದು ತಿಳಿಸಲಾಗಿದೆ……