ಬೆಂಗಳೂರು:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ನೀಡಿದ್ದ ಭಾರತ್ ಬಂದ್ 2ನೇ ದಿನಕ್ಕೆ ಕಾಲಿಟ್ಟಿದ್ದೆ..ಯೆಸ್ ಇಂದು ಬೆಂಗಳೂರಿನಲ್ಲಿ ಬೆಳಗ್ಗೆ ಹತ್ತಾರು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ ಪರಿಣಾಮ ಬಿಎಂಟಿಸಿ ಬಸ್ ಸಂಚಾರ ದಿಢೀರ್ ಸ್ಥಗಿತವಾಗಿದೆ..
ನಿನ್ನೆಯಿಂದ ಒಟ್ಟು 27 ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಬಿಎಂಟಿಸಿ ಬಸ್ ಸಂಚಾರ ಬೆಂಗಳೂರಿನ ಹಲವೆಡೆ ದಿಢೀರ್ ಸ್ಥಗಿತಗೊಂಡಿದೆ.ಮೆಜೆಸ್ಟಿಕ್ ನಿಂದ ಬಸ್ ಗಳ ಸಂಚಾರ ಕಡಿಮೆಯಾದ ಕಾರಣ ಆಟೋ, ಓಲಾ, ಉಬರ್ ಕ್ಯಾಬ್ ಗಳ ಸೇವಾದರದಲ್ಲಿ ಗಣನೀಯ ದರ ಏರಿಕೆ ಕಂಡುಬಂದಿದೆ. ಬಂದ್ ನ ಲಾಭ ಪಡೆಯಲು ಆಟೋ ಚಾಲಕರು ಮುಂದಾಗಿದ್ದು, ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ಇನ್ನು ರಾಯಚೂರು, ಬಳ್ಳಾರಿ ಜಿಲ್ಲೆ ಹೊರತುಪಡಿಸಿ ಎಂದಿನಂತೆ ಎಲ್ಲ ಶಾಲಾ-ಕಾಲೇಜುಗಳು ತೆರೆಯಲಿದ್ದು, ಪರೀಕ್ಷೆಗಳನ್ನ ಮಾತ್ರ ಮುಂದೂಡಲಾಗಿದೆ….