Breaking News

ಭಿನ್ನವಾದ ಪಾತ್ರದಲ್ಲಿ ಶ್ರೀಮುರಳಿಯ ಭರ್ಜರಿ ಭರಾಟೆ..!

ಹಲವಾರು ಶೇಡುಗಳಲ್ಲಿ ಪ್ರೇಕ್ಷಕರ ಮುಂದೆ....

SHARE......LIKE......COMMENT......
ಬೆಂಗಳೂರು: ಶ್ರೀಮುರಳಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿದರೂ ಮಾಸ್ ಅವತಾರದಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ಹೀಗೆ ಸಾಗಿ ಬಂದಿರೋ ಶ್ರೀಮುರಳಿ ಭರಾಟೆಯಲ್ಲಿಯೂ ಮತ್ತದೇ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಈ ಹಿಂದೆಯೇ ಸಾಬೀತಾಗಿತ್ತು. ಆದರೆ ಟ್ರೇಲರ್ ಮೂಲಕ ಕಾಣಿಸಿದ್ದು ಮಾತ್ರ ಮತ್ತೊಂದು ಥರದ ಛಾಯೆ. ಯಾವ ಕ್ರಿಯಾಶೀಲ ನಟರೂ ಮತ್ತೆ ಮತ್ತೆ ಒಂದೇ ಥರದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂಥಾ ಬದಲಾವಣೆಯ ಪರ್ವ ಕಾಲದಲ್ಲಿದ್ದ ಶ್ರೀಮುರಳಿಯೀಗ ಅತ್ಯಂತ ಭಿನ್ನವಾದ ಕಥೆ ಮತ್ತು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಆರಂಭದಿಂದಲೂ ಇದೊಂದು ವಿಶೇಷವಾದ ಕಥೆಯ ಚಿತ್ರ ಎಂಬ ಬಗ್ಗೆ ಚಿತ್ರತಂಡ ಸುಳಿವುಗಳನ್ನು ಬಿಟ್ಟು ಕೊಡುತ್ತಲೇ ಬಂದಿತ್ತು. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರ ಶ್ರೀಮುರಳಿಯವರನ್ನು ಹಲವಾರು ಶೇಡುಗಳಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವಲ್ಲಿ ಗೆದ್ದಿದೆ. ಥರ ಥರದ ಶೇಡುಗಳಿರೋ ಪಾತ್ರದ ಮೂಲಕ ಶ್ರೀಮುರಳಿ ಕೂಡಾ ಎಲ್ಲರೂ ಅಚ್ಚರಿಗೊಳ್ಳುವಂಥಾ ಅಭಿನಯ ನೀಡಿದ್ದಾರೆ. ಚೇತನ್ ಕುಮಾರ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವ ಗೊಂದಲ ಗೋಜಲುಗಳಿಗೂ ಆಸ್ಪದವಿಲ್ಲದಂತೆ ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಭರಾಟೆಯನ್ನು ಕಟ್ಟಿ ಕೊಟ್ಟಿದ್ದಾರೆ…..