Breaking News

ಭೈರಾದೇವಿ ಸಿನಿಮಾದ ಫಸ್ಟ್‌ ಲುಕ್‌..!

ರುದ್ರಭೂಮಿಯ ಅನುಭವವನ್ನು ಪಡೆಯುತ್ತಿರುವ ರಾಧಿಕಾ....

SHARE......LIKE......COMMENT......

ಸಿನಿಮಾ:

ನಟಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವ ಭೈರಾದೇವಿ ಸಿನಿಮಾದ ಫಸ್ಟ್‌ ಲುಕ್‌ ನೋಡಿ ಈಗಾಗಲೇ ಎಲ್ಲರು ಫಿದಾ ಆಗಿದ್ದಾರೆ. ಜೈ ಶ್ರೀ ಆಕ್ಷನ್‌ ಕಟ್‌ ಹೇಳುತ್ತಿರುವ ಭೈರಾದೇವಿ ಸಿನಿಮಾವೂ ಅಘೋರಿಗಳ ಸುತ್ತ ನಡೆಯುವ ಕಥೆಯನ್ನುಆಧರಿಸಿದೆ. ಸುಮಾರು ಹತ್ತು ದಿನಗಳಿಂದ ಬೆಂಗಳೂರಿನ ಸ್ಮಶಾನವೊಂದರಲ್ಲಿ ರಾತ್ರಿ ಚಿತ್ರೀಕರಣ ನಡೆಯುತ್ತಿದ್ದು ರಾತ್ರಿಪೂರ್ತಿ ಶೂಟಿಂಗ್‌ ಇರುವುದರಿಂದ ಇಲ್ಲಿಯೇ ಊಟ, ತಿಂಡಿ, ನಿದ್ರೆ ಎಲ್ಲವನ್ನೂ ಪೂರೈಸುತ್ತ ರುದ್ರಭೂಮಿಯ ಅನುಭವವನ್ನು ಪಡೆಯುತ್ತಿದ್ದಾರೆ ರಾಧಿಕಾ.

‘ಇನ್ನು ಕೆಲವು ದಿನಗಳ ಕಾಲ ಸ್ಮಶಾನದಲ್ಲಿಯೇ ಚಿತ್ರೀಕರಣ ಇದೆ. ‘ಇದು ಅಘೋರಿಗಳ ಬದುಕಿನ ಕಥೆಯನ್ನು ಹೇಳುವುದರಿಂದ ನೈಜ ಸನ್ನಿವೇಶಗಳು ಸಿನಿಮಾಕ್ಕೆ ಬೇಕು ಎಂದು ರುದ್ರಭೂಮಿಯಲ್ಲಿಯೇ ಚಿತ್ರೀಕರಣ ಮಾಡಿದ್ದೇವೆ. ಅದಲ್ಲದೇ ಕಾಳಿ ಮತ್ತು ಅಘೋರಿಯಲ್ಲಿ ರಾಧಿಕಾ ಅವರ ಕೆಲವು ಸನ್ನಿವೇಶವನ್ನು ಸ್ಮಶಾನದಲ್ಲಿಯೇ ಇನ್ನೂ ಕೆಲವು ದಿನ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಜೈ ಶ್ರೀ……