ಅಡುಗೆ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 2 ಕಪ್, ಮೈದಾ ಹಿಟ್ಟು 1 ಕಪ್, ಕಡಲೆಕಾಯಿ ಬೀಜ 1/2 ಕಪ್, ಮೊಸರು 1 ಕಪ್, ಕತ್ತರಿಸಿದ ಈರುಳ್ಳಿ 1 ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ 7- 8 ತುಂಡುಗಳು, ಕತ್ತರಿಸಿದ ಪುದಿನಾ ಸೊಪ್ಪು 2 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು 2 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ, ಶುಂಠಿ ತುರಿ 1 ಚಮಚ ಜೀರಿಗೆ 3 ಚಮಚ, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಸೋಡಾ 1/2 ಚಮಚ, ಎಣ್ಣೆ ಕರಿಯಲು.
ಮಾಡುವ ಸುಲಭ ವಿಧಾನ:
ಕಡಲೆಕಾಯಿ ಬೀಜವನ್ನು ತರಿತರಿಯಾಗಿ ಪುಡಿ ಮಾಡಿ, ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ, ಮೊಸರು, ಈರುಳ್ಳಿ, ಹಸಿಮೆಣಸಿನಕಾಯಿ, ಪುದಿನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಜೀರಿಗೆ, ಎಳ್ಳು, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿಟ್ಟ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಗರಿಗರಿಯಾದ ಮದ್ದೂರು ವಡೆ ತಯಾರು. ಮದ್ದೂರು ವಡೆಯನ್ನು ಕಾಯಿ ಚಟ್ನಿಯೊಂದಿಗೆ ತಿಂದರೆ ಬಲು ರುಚಿ……