Breaking News

ರಾಜೀನಾಮೆ ನಿರ್ಧಾರ ಬದಲಿಸುವಂತೆ ಜಾರಕಿಹೊಳಿಗೆ ಮನವೊಲಿಕೆ..!

ಆತುರದ ನಿರ್ಧಾರ ಬೇಡ ಎಂದ ಪಕ್ಷದ ಹಿರಿಯರು.....

SHARE......LIKE......COMMENT......

ಬೆಳಗಾವಿ: 

ರಾಜೀನಾಮೆ ನಿರ್ಧಾರ ಬದಲಿಸುವಂತೆ ರಮೇಶ್ ಜಾರಕಿಹೊಳಿಗೆ ಮನವೊಲಿಕೆ.. ಆತುರದ ನಿರ್ಧಾರ ಕೈಗೊಳ್ಳದಂತೆ  ರಮೇಶ್ ಜಾರಕಿಹೊಳಿ ಮನವೊಲಿಸಲು ಪಕ್ಷದ ಹಿರಿಯ ನಾಯಕರು  ಯತ್ನಿಸುತ್ತಿದ್ದಾರೆ.

ಬಂಡಾಯ ಶಾಸಕರಿಗೆ ಹಲವು ಅಫರ್ ಗಳನ್ನು ಬಿಜೆಪಿ ನೀಡುತ್ತಿದೆ,. ಕಳೆದ ಮೂರು ತಿಂಗಳಿಂದ ಕೆಲವು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ರಾಜಿನಾಮೆ ನೀಡುವ ಸಂಬಂಧ ಮಾತುಕತೆ ನಡೆಸಿದ್ದಾರೆ, ಬಂಡಾಯ ಶಾಸಕರು ಗುಂಪು ಇಂದು ನಿರ್ಣಾಯದವಾದ ನಿರ್ಧಾರ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ರಮೇಶ್  ಹೊರತು ಪಡಿಸಿ ಹಲವು ಬಂಡಾಯ ಶಾಸಕರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದು, ಅವರೆಲ್ಲಾ ರಾಜೀನಾಮೆ ನೀಡದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಜಾರಕಿಹೊಳಿ ಸೇರಿದಂತೆ ಹಲವು ಬಂಡಾಯ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು, ಆದರೆ ಯಾರೋಬ್ಬರು ಫೋನ್ ಕರೆ ಸ್ವೀಕರಿಸಲಿಲ್ಲ…..