ಬೆಂಗಳೂರು:
ರೈಲ್ವೆ ಪ್ರಯಾಣಿಕರಿಗೆ ಒಂದ್ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಲಗೇಜ್ ಎತ್ಕೊಂಡು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಮೇಯ ಇರೋದಿಲ್ಲ. ಯಾಕೆಂದರೆ ಇಂದಿನಿಂದ ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಆಟೋ, ಟ್ಯಾಕ್ಸಿಗಳ ಹಾವಳಿ ತಪ್ಪಿಸಲು ಬಿಎಂಟಿಸಿ ಇಂದಿನಿಂದ ಬಸ್ ಸೇವೆ ಆರಂಭಿಸಿದೆ. ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬಿಎಂಟಸಿ ಬಸ್ ನಿಲ್ದಾಣವಿದ್ದರೂ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ಗಳು ನೇರ ಆಗಮನ ಸಾಧ್ಯವಿಲ್ಲದ ಕಾರಣ ಪ್ರಯಾಣಿಕರು ಆಟೋ ಟ್ಯಾಕ್ಸಿ ಮೊರೆ ಹೋಗಬೇಕಿತ್ತು. ಆಗ 20 ರೂಪಾಯಿ ಸಂಚಾರದಲ್ಲಿ ಲಗೇಜ್ ಇದೆ ಅಂತ ಖಾಸಗಿ ವಾಹನಗಳು 200 ರೂಪಾಯಿ ವಸೂಲಿ ಮಾಡ್ತಿದರು. ಇದು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿತ್ತು. ಇದನ್ನು ತಪ್ಪಿಸಲು ಸಲುವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದಲೇ ಬಿಎಂಟಿಸಿ ಬಸ್ ಸಂಚಾರಕ್ಕೆ ನೈರುತ್ಯ ರೈಲ್ವೆ ಅನುಮತಿ ನೀಡಿದೆ.
ಹೀಗಾಗಿ ಇಂದಿನಿಂದ ಸಿಟಿ ರೈಲ್ವೆ ನಿಲ್ದಾಣದಿಂದ ಬಸ್ ಸೇವೆ ಲಭ್ಯವಿದೆ. ವಯಸ್ಸಾದವರು, ಮಹಿಳೆಯರು ಲಗೇಜ್ ಹೊತ್ತು ಸುಮಾರು ದೂರ ನಡೆಯಬೇಕಿತ್ತು. ಇದನ್ನೇ ಬಂಡವಾಳ ಮಾಡಿಕೊಳ್ತಿದ್ದ ಆಟೋ ಚಾಲಕರ ವಸೂಲಿಗೆ ಈಗ ಕಡಿವಾಣ ಬಿದ್ದಿದೆ. ರೈಲು ನಿಲ್ದಾಣದ ಗೇಟ್ NO 3ರಿಂದ ನಗರದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್ ಸೇವೆಗೆ ಇವತ್ತು ಚಾಲನೆ ಸಿಕ್ಕಿದೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 1.7 ಕೋಟಿ ವೆಚ್ಚದಲ್ಲಿ 3ನೇ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಜೂನ್‌ನಲ್ಲಿ ಇದನ್ನು ಉದ್ಘಾಟಿಸಲಾಗಿದ್ದು, ಈಗ ಬಸ್ ಇಲ್ಲಿಂದಲೇ ಸಂಚಾರ ನಡೆಸಲಿದೆ…..