ಬಾಗಲಕೋಟೆ:
ನನ್ನ ಒಬ್ಬನೇ ಮಗನ ಮೇಲೆ ಆಣೆ ಮಾಡಿ ಹೇಳುತ್ತೇನೆ… ಸಾಲ ಮನ್ನಾದ ವಿಚಾರದಲ್ಲಿ ನಾನು ರೈತರಿಗೆ ಮೋಸ ಮಾಡುವುದಿಲ್ಲ.” ಸಾಲ ಮನ್ನಾದ ವಿಚಾರದಲ್ಲಿ ಯಾರದ್ದೋ ಮಾತುಗಳಿಗೆ ಕಿವಿಗೊಡಬೇಡಿ. ಸಾಲ ಮನ್ನಾ ಮಾಡೇ ಮಾಡುತ್ತೇನೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಭಾವುಕರಾಗಿ ನುಡಿದಿದ್ದಾರೆ.
ರಾಜ್ಯದ ಅಲ್ಲಲ್ಲಿ ಕೇಳಿ ಬರುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಮಾತನಾಡಿದ ಅವರು, ಕೃಷಿ ಸಾಲ ಮನ್ನಾ ಮಾಡುವುದು ಶತಃಸಿದ್ಧ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಮನೆ ನಿರ್ಮಾಣಕ್ಕೆ, ಖಾಸಗಿ ಸಾಲಕ್ಕೆ ಯಾರೂ ಹೊಣೆಗಾರರಲ್ಲ. ಈ ವಿಚಾರವಾಗಿ ನಡೆಯುತ್ತಿರುವ ದುರ್ಘಟನೆಗಳು ಬೇಸರ ತರಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ರೈತರು ಮಾಡಿರುವ ಕೃಷಿ ಸಾಲ ಮನ್ನಾ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಯಾವುದೇ ಭಾಗದಲ್ಲಿ ಬ್ಯಾಂಕ್ ಅಧಿಕಾರಿಗಳು ಕೃಷಿ ಸಾಲ ಪಡೆದವರಿಗೆ ನೋಟಿಸ್ ಕೊಟ್ಟರೆ ಬ್ಯಾಂಕ್ ಅಧಿಕಾರಿ ಮತ್ತು ನೋಟಿಸ್ ನೀಡಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದೂ ಅವರು ತಿಳಿಸಿದರು……