Breaking News

ಹಸುವಿನ ಮೇಲೆ ಅತ್ಯಾಚಾರ..!

ಅಪರಿಚಿತ ಕಾಮುಕನೊಬ್ಬನ ಕೀಚಕತನ....

File shot
SHARE......LIKE......COMMENT......

ಅಮರಾವತಿ: 

ಅಪರಿಚಿತ ಕಾಮುಕನೊಬ್ಬ ಹಸುವಿನ ಮೇಲೆ ಕೀಚಕತನ ಮೆರೆದಿದ್ದಾನೆ. ಹೌದು, ಆಂಧ್ರಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದ್ದು,ಕಾಮುಕರು ತಮ್ಮ ಲೈಂಗಿಕ ತೃಷೆ ತೀರಿಸಿಕೊಳ್ಳಲು ಪ್ರಾಣಿಗಳನ್ನು ಸಹ ಬಳಸಿಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

ಪೂರ್ವ ಗೋದಾವರಿ ಜಿಲ್ಲೆಯ ಪಿಥಪುರಂ ಮಂಡಲಂ ಎಂಬಲ್ಲಿ ಬುಚಿಚಾರಾಜು ಎಂಬವರು ಹೈನುಗಾರಿಕೆ ನಡೆಸುತ್ತಿದ್ದು, ಶನಿವಾರ ರಾತ್ರಿ ಅವರದೊಂದು ಆಕಳು ಕೊಟ್ಟಿಗೆಯಿಂದ ನಾಪತ್ತೆಯಾಗಿತ್ತು. ಕೆಲ ಗಂಟೆಗಳ ಬಳಿಕ ಪಕ್ಕದ ಹೊಲದಲ್ಲಿ ಕಟ್ಟಿಹಾಕಿರುವ ಸ್ಥಿತಿಯಲ್ಲಿ ಹಸು ಪತ್ತೆಯಾಗಿದ್ದು, ತೀವ್ರ ಅಸ್ವಸ್ಥವಾಗಿತ್ತು. ಅದರ ಗುಪ್ತಾಂಗದಲ್ಲಿ ರಕ್ತ ಸುರಿಯುತ್ತಿರುವುದನ್ನು ಗಮನಿಸಿದ ಬುಚಿಚಾರಾಜು, ಕೂಡಲೇ ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಹಸುವನ್ನು ಪರೀಕ್ಷಿಸಿದ ವೈದ್ಯರು, ಅದರ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದು, ಹೌಹಾರಿ ಹೋದ ಬಾಚಿಚಾರಾಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ……