ಬ್ಯೂಟಿ ಟಿಪ್ಸ್:
ಸ್ಟೈಲಿಶ್ ಗಡ್ಡ ಈಗಿನ ಫ್ಯಾಷನ್ ಟ್ರೆಂಡ್ ಆಗಿದೆ. ಪುರುಷರು ಕೂಡ ಹೆಚ್ಚು ಹೊತ್ತು ಕನ್ನಡಿ ಮುಂದೆ ನಿಂತು ತಮ್ಮ ಗಡ್ಡದ ಆರೈಕೆಯಲ್ಲಿ ನಿರತರಾಗುತ್ತಿದ್ದಾರೆ. ಟ್ರಿಮ್ ಮಾಡುವುದು, ಬಾಚುವುದರ ಜೊತೆಗೆ ಗಡ್ಡದ ಕೂದಲು ಚೆನ್ನಾಗಿ ಬೆಳೆಯಲು ಆಯಿಲ್ ಮಸಾಜ್ನ ಅಗತ್ಯವೂ ಇದೆ.
ಗಡ್ಡದ ಸೌಂದರ್ಯ ಹೆಚ್ಚಿಸಲು ಕೆಲವು ತೈಲಗಳು ಸಹಾಯ ಮಾಡುತ್ತವೆ..
*ತೆಂಗಿನ ಎಣ್ಣೆ : ಇದು ನೈಸರ್ಗಿಕವಾಗಿ ತೇವಾಂಶ ಭರಿತವಾದ ಉತ್ಪನ್ನವಾಗಿದೆ. ಕೊಬ್ಬರಿ ಎಣ್ಣೆ ಶುಷ್ಕ ವಾತಾವರಣದಲ್ಲಿ ಕೂಡಾ ಚರ್ಮದ ಪೋಷಕಾಂಶಗಳನ್ನು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿರುತ್ತದೆ. ಜೊತೆಗೆ ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.
*ಆರ್ಗನ್ ತೈಲ: ಆರ್ಗನ್ ಮರದ ಹಣ್ಣು ಮತ್ತು ಬೀಜಗಳಿಂದ ಸಂಸ್ಕರಿಸಿ ತೆಗೆದ ಎಣ್ಣೆ ಆರ್ಗನ್ ತೈಲ. ಇದರ ಬಳಕೆಯಿಂದ ಚರ್ಮವು ಮೃದುವಾಗಿರುವುದಲ್ಲದೆ, ಗಡ್ಡದ ಕೂದಲನ್ನು ಮೃದುವಾಗಿಸಿ ಶೈನಿಯಾಗಿಸುತ್ತದೆ.
*ಹೇಜಲ್ನಟ್ : ಇದು ಕಂದು ಬಣ್ಣದ ಹೇಜಲ್ ನಟ್ ಬೀಜಗಳಿಂದ ತೆಗೆದ ಎಣ್ಣೆಯಾಗಿದ್ದು, ಇದರಿಂದ ನಿಮ್ಮ ಮುಖದಲ್ಲಿನ ಮೊಡವೆಗಳು ಮತ್ತು ತುರಿಕೆಗಳನ್ನು ನಿವಾರಿಸುತ್ತದೆ. ಇದರಿಂದ ತ್ವಚೆಯ ಸೋಂಕು ಕಡಿಮೆಯಾಗಿ ಗಡ್ಡ ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.
*ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಸಾಫ್ಟ್ ಆಗುತ್ತದೆ ಮತ್ತು ಉತ್ತಮ ಮಾಯಿಶ್ಚರ್ ಸಿಗುತ್ತದೆ. ಇದು ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ಗಡ್ಡದ ಕೂದಲಿಗೆ ಬಾದಾಮಿ ಎಣ್ಣೆಯ ಮಸಾಜ್ ನೀಡುವುದರಿಂದ ಕೂದಲು ಸಾಫ್ಟ್ ಆಗುತ್ತದೆ.
*ಜೋಜೊಬಾ: ಜೋಜೊಬಾ ಎಂಬ ಪೊದೆ ಜಾತಿಗೆ ಸೇರಿದ ಸಸ್ಯದ ಬೀಜಗಳಿಂದ ಸಂಸ್ಕರಿಸಿ ತೆಗೆದ ಎಣ್ಣೆಯೇ ಜೊಜೊಬಾ ಆಯಿಲ್. ನೈಸರ್ಗಿಕವಾದ ಈ ಎಣ್ಣೆಯನ್ನು ಚರ್ಮವು ತುಂಬಾ ಸುಲಭವಾಗಿ ಹೀರಿಕೊಳ್ಳುತ್ತದೆ. ಈ ಮೂಲಕ ಗಡ್ಡದ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ…….