ಚಾಮರಾಜನಗರ:
ಸತತ ಎರಡು ತಿಂಗಳಿನಿಂದ ದಶ ಗಜಗಳು ಪ್ರವಾಸಿಗರಿಗೆ, ದಾರಿಹೋಕರಿಗೆ ದರ್ಶನ ನೀಡುತ್ತಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮೆಲುಕಾಮನಹಳ್ಳಿಯಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮೆಲುಕಾಮನಹಳ್ಳಿಯ ಆಂಜನೇಯ ಗುಡ್ಡದಲ್ಲಿ 10 ಕಾಡಾನೆಗಳ ಹಿಂಡು ಬೀಡು ಬಿಟ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಊಟಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಆನೆಗಳ ಹಿಂಡನ್ನು ಕಂಡು ಪ್ರವಾಸಿಗರು ಸೆಲ್ಫಿ, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ ಇನ್ನು, ಅಕ್ಕಪಕ್ಕದ ಜಮೀನುಗಳಿಗೂ ಯಾವುದೇ ಹಾನಿ ಮಾಡದೇ ಗುಡ್ಡದಲ್ಲೇ ಮೇಯ್ದುಕೊಂಡು ಬೆಳಗ್ಗೆ-ಸಂಜೆ ಎಲ್ಲರಿಗೂ ದರ್ಶನ ನೀಡುತ್ತಿವೆ ಎಂದು ತಿಳಿದುಬಂದಿದೆ……